ಕೀವ್: ಉಕ್ರೇನ್ ಪೂರ್ವದ ಡೊನೆಟ್ಸ್ಕ್ ಪ್ರದೇಶದ ಚೆಸಿವ್ ಯಾರ್ ನಗರದ ಜನವಸತಿ ಪ್ರದೇಶದ ಅಪಾರ್ಟ್ಮೆಂಟ್ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಲ್ಲಿ 15 ನಾಗರಿಕರು ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಟ್ಟಡ ಬಹುತೇಕ ಧ್ವಂಸಗೊಂಡಿದ್ದು, 20ಕ್ಕೂ ಹೆಚ್ಚು ನಾಗರಿಕರು ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ.
ತಡ ರಾತ್ರಿ ರಷ್ಯಾ ಟ್ರಕ್ ಮೂಲಕ ಹಾರಿಸಿದ ಕ್ಷಿಪಣಿ ಅಪಾರ್ಟ್ಮೆಂಟ್ ಗೆ ಅಪ್ಪಳಿ, ಭಾರಿ ಸಾವು-ನೋವು ಸಂಭವಿಸಿದೆ. ಹಾರ್ಕಿವ್ ಮತ್ತು ಮೈಕೋಲೈವ್ ನಗರಗಳ ಮೇಲೂ ಶೆಲ್ ದಾಳಿ ಮುಂದುವರಿದಿದ್ದು, 18 ಜನರು ಗಾಯಗೊಂಡು, ಒಬ್ಬ ನಾಗರಿಕ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ದಾಳಿ ಬಗ್ಗೆ ರಷ್ಯಾ ರಕ್ಷಣಾ ಸಚಿವಾಲಯ ಪ್ರತಿಕ್ರಿಯಿಸಿಲ್ಲ.