ಟೋಕಿಯೊ, ಏ.15: ಜಪಾನ್ ಪ್ರಧಾನಿ ಫಿಮಿಯೋ ಕಿಷಿಡ ಅವರ ಮೇಲೆ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಸ್ಮೋಕ್ ಬಾಂಬ್ ಎಸೆಯಲಾಗಿದೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ.
ಸೈಕಾಝಾಕಿ ಬಂದರಿನಲ್ಲಿ ಘಟನೆ ನಡೆದಿದ್ದು, ಫಿಮಿಯೋ ಕಿಷಿಡ ತಕ್ಷಣ ಘಟನಾ ಸ್ಥಳದಿಂದ ಹೊರಟುಹೋದರು. ಸ್ಮೋಕ್ ಬಾಂಬ್ ಸ್ಪೋಟದಿಂದ ಯಾವುದೇ ಗಾಯ ಅಥವಾ ಹಾನಿಯಾಗಿಲ್ಲ ಎಂದು ವರದಿಗಳು ತಿಳಿಸಿವೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. ಬಳಿಕ ಘಟನೆಗೆ ಸಂಬಂಧಿಸಿ ಶಂಕಿತ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಉಪಚುನಾವಣೆಯನ್ನು ಬೆಂಬಲಿಸಿ ಹೊರಾಂಗಣ ಭಾಷಣ ಮಾಡಲು ತಯಾರಿ ನಡೆಸುತ್ತಿದ್ದ ಫಿಮಿಯೋ ಕಿಷಿಡ ಮೇಲೆ ಬೆಳಿಗ್ಗೆ 11.30 ರ ಸುಮಾರಿಗೆ (ಸ್ಥಳೀಯ ಕಾಲಮಾನ) ಹೊಗೆಯ ಜ್ವಾಲೆಯನ್ನು ಹೋಲುವ ವಸ್ತುವನ್ನು ಎಸೆಯಲಾಗಿದೆ ಎಂದು ಕ್ಯೋಡೋ ನ್ಯೂಸ್ ವರದಿ ಮಾಡಿದೆ.