ಇಸ್ರೇಲ್: ಇಸ್ರೇಲ್ ಮತ್ತು ಹಮಾಸ್ ನಡುವಿನ ಸಮರ ದಿನದಿಂದ ದಿನಕ್ಕೆ ಒಂದೊಂದು ದಿಕ್ಕು ಪಡೆಯುತ್ತಿದೆ. ಇದೀಗ ಇಸ್ರೇಲ್ ಗಾಜಾದಲ್ಲಿ ಮಿಲಿಟರಿ ಕಾರ್ಯಚರಣೆ ಮಾಡುತ್ತಿದ್ದು, ಇಸ್ರೇಲ್ ಸೇನೆ ಗಾಜಾದಲ್ಲಿರುವ ಶಾಲೆಯ ಮೇಲೆ ಕಣ್ಣಿಟ್ಟಿದೆ.
ಈ ಶಾಲೆಗಳನ್ನು ಹಮಾಸ್ ತಮ್ಮ ಶಸ್ತ್ರಾಸ್ತ್ರ ತಾಣವಾಗಿ ಮಾಡಿಕೊಂಡಿದ್ದು, ರಾಕೆಟ್ ಲಾಂಚರ್ಗಳು ಮತ್ತು ಮಾರ್ಟರ್ ಶೆಲ್ಗಳನ್ನು ಪತ್ತೆ ಮಾಡಿದ ಒಂದು ವಿಡಿಯೋ ಸಮೇತ ಸಾಕ್ಷ್ಯವನ್ನು ಎಕ್ಸ್ನಲ್ಲಿ ಇಸ್ರೇಲ್ ಹಂಚಿಕೊಂಡಿದೆ.
ಆರ್ಪಿಜಿಗಳು, ಮಾರ್ಟರ್ ಶೆಲ್ಗಳು ಮತ್ತು ಇತರ ಶಸ್ತ್ರಾಸ್ತ್ರಗಳನ್ನು ಇಸ್ರೇಲ್ ಐಡಿಎಫ್ ಪಡೆ ಉತ್ತರ ಗಾಜಾದ ಶಿಶು ವಿಹಾರ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಪತ್ತೆ ಮಾಡಿದೆ. ಶಿಶುವಿಹಾರಗಳಲ್ಲಿ ಆಟಿಕೆಗಳನ್ನು ಸಂಗ್ರಹಿಸಬೇಕೇ ಹೊರತು ಶಸ್ತ್ರಾಸ್ತ್ರಗಳಲ್ಲ ಎಂದು ಇಸ್ರೇಲ್ ಹೇಳಿದೆ.
ಇನ್ನು ಆಸ್ಪತ್ರೆಗಳನ್ನು ಕೂಡ ಹಮಾಸ್ ಶಸ್ತ್ರಾಸ್ತ್ರ ಸಂಗ್ರಹ ತಾಣವಾಗಿ ಮಾಡಿಕೊಂಡಿದೆ. ಈ ಹಿಂದೆ ಇಸ್ರೇಲ್ ಈ ಆಸ್ಪತ್ರೆಗಳ ನೆಲಮಾಳಿಗೆಯಲ್ಲಿ ಸ್ಫೋಟಕ ಬಾಡಿ ವೆಸ್ಟ್ಗಳು ಮತ್ತು ಹ್ಯಾಂಡ್ ಗ್ರೆನೇಡ್ಗಳನ್ನು ಪತ್ತೆ ಮಾಡಿತು.
ತೆಲುಗು ನಟ ಕೊನಿಡೆಲಾ ಚಿರಂಜೀವಿ, ಹಿರಿಯ ನಟಿ ವೈಜಯಂತಿಮಾಲಾ ಬಾಲಿ, ಸುಪ್ರೀಂ ಕೋರ್ಟ್ನ ಮೊದಲ ಮಹಿಳಾ ನ್ಯಾಯಾಧೀಶೆ ದಿ.ಎಂ ಫಾತಿಮಾ…
ಏರ್ ಇಂಡಿಯಾ ವಿಮಾನ ಸಂಸ್ಥೆಯ ಉದ್ಯೋಗಿಗಳು ಹೇಳದೆ ಕೇಳದೆ ರಜಾ ಹಾಕಿದ್ದರಿಂದ ಇಂದು ಏರ್ ಇಂಡಿಯಾ ಎಕ್ಸ್ಪ್ರೆಸ್ 85 ವಿಮಾನಗಳನ್ನು…
ರಾಜ್ಯ ಗೃಹ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿನ ಧಾರವಾಡ ಶ್ರೀ ಎನ್.ಎ. ಮುತ್ತಣ್ಣ ಸ್ಮಾರಕ ಪೊಲೀಸ್ ಮಕ್ಕಳ ವಸತಿ ಶಾಲೆಯಲ್ಲಿ ಎಪ್ರಿಲ್-2024…
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರವು ನಗರದಲ್ಲಿ ಗುರುವಾರ ನಡೆಸಿದ ರಾಜಿ ಸಂಧಾನ ಯಶಸ್ವಿಯಾಗಿದ್ದು, ಮೂವರು ದಂಪತಿ ವಿರಸ ಮರೆತು ಒಂದಾಗಿದ್ದಾರೆ.
ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.
ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…