ಲಂಡನ್: ಹಮಾಸ್ ರಾಕೆಟ್ ಲಾಂಚರ್ಗಳನ್ನು ನಾಶಮಾಡಲು ಇಸ್ರೇಲಿ ಪಡೆಗಳು ಹೊಸ ಮತ್ತು ಇತ್ತೀಚಿನ ಶಸ್ತ್ರಾಸ್ತ್ರ ವ್ಯವಸ್ಥೆ ‘ಐರನ್ ಸ್ಟಿಂಗ್’ ಅಳವಡಿಸಿಕೊಂಡಿದೆ ಎಂದು ಮಾಧ್ಯಮ ವರದಿಗಳು ಹೇಳಿವೆ.
ತಮ್ಮ ವೈಮಾನಿಕ ದಾಳಿಯ ಭಾಗವಾಗಿ, ಇಸ್ರೇಲಿ ಸೈನ್ಯ ಮತ್ತು ವಾಯುಪಡೆ ‘ಐರನ್ ಸ್ಟಿಂಗ್’ ಆಯುಧವನ್ನು ಬಳಸುತ್ತಿದ್ದೇವೆ ಎಂದು ಹೇಳಿಕೊಂಡಿದೆ. ಇದನ್ನು ‘ನವೀನ ಮತ್ತು ನಿಖರವಾದ ಮಾರ್ಟರ್ ಬಾಂಬ್’ ಎಂದು ವಿವರಿಸಿದೆ. ಐಡಿಎಫ್ ತನ್ನ ಇತ್ತೀಚಿನ ಅಸ್ತ್ರ ‘ಐರನ್ ಸ್ಟಿಂಗ್’ ನ ವೀಡಿಯೊ ಹಂಚಿಕೊಂಡಿದ್ದು, ಶತ್ರುರಾಕೆಟ್ ಲಾಂಚರ್ ಅನ್ನು ನಾಶಪಡಿಸುವುದು ವಿಡಿಯೋದಲ್ಲಿದೆ.
ಈ ನಡುವೆ ದಕ್ಷಿಣ ಗಾಜಾದ ಖಾನ್ ಯೂನಿಸ್ನ ಪೂರ್ವದಲ್ಲಿ ಒಳನುಸುಳುವಿಕೆ ನಡೆದಿದೆ ಎಂದು ಇಸ್ರೇಲ್ ಹೇಳಿದೆ. ನುಸುಳುಕೋರರು ಎರಡು ಬುಲ್ಡೋಜರ್ಗಳು ಮತ್ತು ಟ್ಯಾಂಕ್ ಅನ್ನು ನಾಶಪಡಿಸಿದ್ದಾರೆ ಎಂದು ಇಸ್ರೇಲ್ ಹೇಳಿದೆ.