ನ್ಯೂಯಾರ್ಕ್: ಅಮೆರಿಕದ ಉತ್ತರ ಕೆರೊಲಿನಾ ರಾಜ್ಯದ ನ್ಯೂಪೋರ್ಟ್ ನಗರದಲ್ಲಿ ಭಾರತೀಯ ಮೂಲದ ಹೋಟೆಲ್ ನಲ್ಲಿ ಮಾಲೀಕನನ್ನು ದುಷ್ಕರ್ಮಿ ಗುಂಡಿಕ್ಕಿ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸತ್ಯೇನ್ ನಾಯಕ್ 46) ಕೊಲೆಗೀಡಾದವರು. “ಡಿ.6 ರಂದು ಬೆಳಗ್ಗೆ 10 ಗಂಟೆಯ ಸುಮಾರಿಗೆ ಹೋಟೆಲ್ಗೆ ವ್ಯಕ್ತಿಯೊಬ್ಬ ನುಗ್ಗಿ ಅತಿಕ್ರಮಣ ಮಾಡಿದ ಬಗ್ಗೆ 911 ಕೇಂದ್ರಕ್ಕೆ ಕರೆ ಬಂದಿತ್ತು. ಸ್ವಲ್ಪ ಸಮಯದ ಬಳಿಕ ಗುಂಡು ಹಾರಿಸಲಾಗಿದೆ ಎಂದು ಎರಡನೇ ಕರೆ ಬಂದಿತ್ತು. ಹೀಗಾಗಿ ಅಧಿಕಾರಿಗಳು ತಕ್ಷಣವೇ ಘಟನಾ ಸ್ಥಳಕ್ಕೆ ತೆರಳಿದ್ದಾರೆ.
ಗಾಯಗೊಂಡಿದ್ದ ಸತ್ಯೇನ್ ನಾಯಕ್ ಅವರನ್ನು ನಮ್ಮ ಸಿಬ್ಬಂದಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಕೊಲೆಗಾರನನ್ನು ಟ್ರಾಯ್ ಕೆಲ್ಲಮ್ (59) ಎಂದು ಗುರುತಿಸಲಾಗಿದೆ.
ಗುಜರಾತ್ ಮೂಲದ ಸತ್ಯೇನ್ ನಾಯಕ್ ತಮ್ಮ ಕುಟುಂಬದೊಂದಿಗೆ ಹೋಟೆಲ್ ವ್ಯವಹಾರ ನಡೆಸುತ್ತಿದ್ದರು. ʼʼಇದ್ದಕ್ಕಿದ್ದಂತೆ ಹೋಟೆಲ್ಗೆ ನುಗ್ಗಿದ ಟ್ರಾಯ್ ಕೆಲ್ಲಮ್ ಬಾಗಿಲು ಭದ್ರ ಪಡಿಸಿ ಗುಂಡು ಹಾರಿಸಿದ್ದಾನೆʼʼ ಎಂದು ಸತ್ಯೇನ್ ನಾಯಕ್ ಅವರ ಸಂಬಂಧಿ ಹರ್ನಿಶ್ ಹೇಳಿದ್ದಾರೆ.