News Karnataka Kannada
Monday, April 29 2024
ವಿದೇಶ

ಜೋರ್ಡಾನ್‌ ಇಸ್ಲಾಂ ಬಾಂಧವರೇ ಜಿಹಾದ್‌ ಹೋರಾಟಕ್ಕಿದು ಪ್ರಶಸ್ತ ಕಾಲ ಎಂದ ಹಮಾಸ್‌ ಮುಖಂಡ

Hamas leader says Jordan's Islamic brethren are the best time to fight jihad
Photo Credit : News Kannada

ಲಂಡನ್: ಇಸ್ರೇಲ್ ವಿರುದ್ಧದ ಹೋರಾಟದಲ್ಲಿ ನೆರೆಯ ರಾಷ್ಟ್ರಗಳ ಜನರು ಒಗ್ಗೂಡಬೇಕು. ಅಲ್ಲದೆ ಪ್ರಪಂಚದ ಎಲ್ಲ ಮುಸ್ಲಿಂ ರಾಷ್ಟ್ರಗಳು ಇಸ್ರೇಲ್‌ ವಿರುದ್ಧ ಹೋರಾಟ ನಡೆಸಬೇಕು ಎಂದು ಹಮಾಸ್‌ ಸಂಘಟನೆ ಮಾಜಿ ಮುಖ್ಯಸ್ಥ ಖಲೀದ್ ಮೆಶಾಲ್ ಕರೆಕೊಟ್ಟಿದ್ದಾರೆ.

“ನಾವು ಶುಕ್ರವಾರ ದಂದು ಬೀದಿಗಿಳಿದು ಹೋರಾಟ ನಡೆಸಬೇಕು ಎಂದು ಪ್ರಸ್ತುತ ಹಮಾಸ್‌ನ ಡಯಾಸ್ಪೊರಾ ಕಚೇರಿಯ ಮುಖ್ಯಸ್ಥರಾಗಿರುವ ಖಲೀದ್ ಮೆಶಾಲ್ ಹೇಳಿದ್ದಾರೆ.

ಜೋರ್ಡಾನ್, ಸಿರಿಯಾ, ಲೆಬನಾನ್ ಮತ್ತು ಈಜಿಪ್ಟ್‌ನ ಸರ್ಕಾರಗಳು ಮತ್ತು ಜನರು ಪ್ಯಾಲೆಸ್ಟೀನಿಯನ್ನರನ್ನು ಬೆಂಬಲಿಸುವ ದೊಡ್ಡ ಜವಾಬ್ದಾರಿ ಹೊಂದಿದ್ದಾರೆ. ಜೋರ್ಡಾನ್‌ನ ಬುಡಕಟ್ಟು ಜನಾಂಗದವರು, ಜೋರ್ಡಾನ್‌ನ ಮಕ್ಕಳು, ಜೋರ್ಡಾನ್ ಸಹೋದರರು ಮತ್ತು ಸಹೋದರಿಯರು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು. ಇದು ಸತ್ಯದ ಕ್ಷಣ. ನಿಮಗೆಲ್ಲರಿಗೂ ನಿಮ್ಮ ಜವಾಬ್ದಾರಿ ತಿಳಿದಿದೆ ಎಂದು ಹೇಳಿದ್ದಾರೆ. ಅಲ್ಲದೆ ಜಿಹಾದ್‌ ಕಲಿಸುವ ವಿದ್ವಾಂಸರು, ಕಲಿಯುವವರಿಗೆ ಇದು ಸಿದ್ಧಾಂತವನ್ನು ಪ್ರಾಯೋಗಿಕವಾಗಿ ಅನ್ವಯಿಸಲು ಇರುವ ಅಪೂರ್ವ ಕ್ಷಣ ಎಂದು ಅವರು ಹೇಳಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು