ಪ್ಯಾರಿಸ್: ಫ್ರಾನ್ಸ್ ನ ಆರು ವಿಮಾನ ನಿಲ್ದಾಣಗಳ ಮೇಲೆ ದಾಳಿ ನಡೆಸುವುದಾಗಿ ಇಮೇಲ್ ಮೂಲಕ ಬೆದರಿಕೆ ಹಾಕಲಾಗಿದ್ದು, ಈ ನಿಟ್ಟಿನಲ್ಲಿ ಅಲ್ಲಿಂದ ಪ್ರಯಾಣಿಕರನ್ನು ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ಯಾರಿಸ್ ಬಳಿಯ ಲಿಲ್ಲೆ, ಲಿಯಾನ್, ನಾಂಟೆಸ್, ನೈಸ್, ಟೌಲೌಸ್ ಮತ್ತು ಬ್ಯೂವೈಸ್ ವಿಮಾನ ನಿಲ್ದಾಣಗಳಿಗೆ ಬೆದರಿಕೆ ಬಂದಿದೆ. ಅಕ್ಟೋಬರ್ 7 ರಂದು ಇಸ್ರೇಲ್ನ ಮೇಲೆ ಹಮಾಸ್ ದಾಳಿ ಬಳಿಕ ಫ್ರಾನ್ಸ್ ಅರಾಸ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಗ್ರೂಪ್ ನ ವ್ಯಕ್ತಿಯೊಬ್ಬ ಶಿಕ್ಷಕರೊಬ್ಬರ ಮೇಲೆ ಮಾರಣಾಂತಿಕ ದಾಳಿ ನಡೆಸಿದ್ದ, ಇದೀಗ ಬೆದರಿಕೆ ಈ ಮೇಲ್ ಬಂದಿದೆ.
ಫ್ರಾನ್ಸ್ನ ವಾಯುಯಾನ ಪ್ರಾಧಿಕಾರದ ವಕ್ತಾರರು ಲಿಲ್ಲೆ, ಲಿಯಾನ್, ಟೌಲೌಸ್ ಮತ್ತು ಬ್ಯೂವೈಸ್ನಲ್ಲಿ ಸ್ಥಳಾಂತರ ಪ್ರಕ್ರಿಯೆ ಕೈಗೊಂಡಿರುವುದಾಗಿ ಹೇಳಿದ್ದಾರೆ.