ಲಂಡನ್: ಲಂಡನ್ನಲ್ಲಿ ಭಯಾನಕ ಘಟನೆಯೊಂದು ಸಂಭವಿಸಿದೆ. ಪಶ್ಚಿಮ ಲಂಡನ್ನ ಮನೆಯೊಂದರಲ್ಲಿ ಸಂಭವಿಸಿದ ಬೆಂಕಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಘಟನೆಯ ಕುರಿತು ಸೋಮವಾರದಂದು ಮೆಟ್ರೋಪಾಲಿಟನ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಪೊಲೀಸರು ಇನ್ನೂ ಮೃತರನ್ನು ಹೆಸರಿಸಿಲ್ಲ, ಆದರೆ ಸ್ಥಳೀಯ ವರದಿಗಳ ಪ್ರಕಾರ ಕುಟುಂಬವು ಭಾರತೀಯ ಮೂಲದವರಾಗಿದ್ದು, ಭಾನುವಾರ ರಾತ್ರಿ ಬೆಂಕಿ ಸಂಭವಿಸುವ ಮೊದಲು ದೀಪಾವಳಿಯನ್ನು ಆಚರಿಸುತ್ತಿದ್ದರು ಎಂದು ಹೇಳಲಾಗಿದೆ.
ಅಗ್ನಿ ಅವಘಡದಲ್ಲಿ ಗಾಯಗೊಂಡಿರುವ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಅವರ ಜೀವಕ್ಕೆ ಯಾವುದೇ ಬೆದರಿಕೆ ಇಲ್ಲ. ಹೌನ್ಸ್ಲೋದಲ್ಲಿ ಪೊಲೀಸ್ ನಿಯೋಜನೆಯ ಜವಾಬ್ದಾರಿಯನ್ನು ಹೊಂದಿರುವ ಮೆಟ್ರೋಪಾಲಿಟನ್ ಪೊಲೀಸ್ ಮುಖ್ಯ ಅಧೀಕ್ಷಕ ಸೀನ್ ವಿಲ್ಸನ್ ಹೇಳಿದರು. ಈ ದುರಂತ ಘಟನೆಯಲ್ಲಿ ಪ್ರಾಣ ಕಳೆದುಕೊಂಡವರ ಪ್ರೀತಿಪಾತ್ರರ ಜೊತೆಯಲ್ಲಿ ನಾವಿರುತ್ತೇವೆ ಎಂದು ಹೇಳಿದರು.