News Karnataka Kannada
Monday, April 29 2024
ವಿದೇಶ

92 ನೇ ವಯಸ್ಸಿನಲ್ಲಿಯೂ ಡೇಟಿಂಗ್‌: ಮಾಧ್ಯಮ ಜಗತ್ತಿನ ದೊರೆಯ ರಸಿಕತೆಯ ಕತೆ ಇದು

Dating even at the age of 92: This is the story of the king of the media world
Photo Credit : IANS

ಸ್ಯಾನ್ ಫ್ರಾನ್ಸಿಸ್ಕೋ: ಮಾಧ್ಯಮ ಜಗತ್ತಿನ ದೊರೆ ರೂಪರ್ಟ್ ಮುರ್ಡೋಕ್ 92 ನೇ ವಯಸ್ಸಿನಲ್ಲಿಯೂ 66 ವರ್ಷದ ನಿವೃತ್ತ ವಿಜ್ಞಾನಿಯೊಂದಿಗೆ ಡೇಟಿಂಗ್‌ ಮಾಡುತ್ತಿದ್ದು ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ನಿವೃತ್ತ ವಿಜ್ಞಾನಿ ಎಲೆನಾ ಝುಕೋವಾ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ರೂಪರ್ಟ್ ಮುರ್ಡೋಕ್ ಮತ್ತು ಎಲೆನಾ ಝುಕೋವಾ ಜೋಡಿಯಾಗಿ ಬೋಟ್ ಹೌಸ್ ನಲ್ಲಿ ರಜೆಯನ್ನು ಆನಂದಿಸುತ್ತಿದ್ದಾರೆ ಎಂದು ವದಂತಿಗಳಿವೆ. ರೂಪರ್ಟ್ ಮುರ್ಡೋಕ್ ಅವರ ಮೂರನೇ ಪತ್ನಿ ವೆಂಡಿ ಡೆಂಗ್ ಮೂಲಕ ಎಲೆನಾ ಪರಿಚಯವಾಯಿತು ಎಂದು ಹೇಳಲಾಗುತ್ತದೆ.

ಎಲೆನಾ ಝುಕೋವಾ (66) ಆನ್ವಯಿಕ ಜೀವಶಾಸ್ತ್ರಜ್ಞರಾಗಿ ಕೆಲಸದಿಂದ ನಿವೃತ್ತರಾದರು. ಅವರು ನಿವೃತ್ತರಾಗುವ ಮೊದಲು ಲಾಸ್ ಏಂಜಲೀಸ್‌ನ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಕ್ಲಿನಿಕಲ್ ಸಂಶೋಧನಾ ವಿಭಾಗದಲ್ಲಿ ಕೆಲಸ ಮಾಡಿದ್ದರು.

ವಿಚ್ಛೇದನದ ಕತೆ: ರೂಪರ್ಟ್‌ ಮುರ್ಡೋಕ್‌ ತನ್ನ ಮೊದಲ ಮೂವರು ಹೆಂಡತಿಯರಿಂದ ಆರು ಮಕ್ಕಳನ್ನು ಹೊಂದಿದ್ದಾರೆ. ಕೆಲ ವರ್ಷದ ಹಿಂದೆ ನಾಲ್ಕನೇ ಪತ್ನಿಗೆ ವಿಚ್ಛೇದನ ನೀಡಿದ್ದರು. 2016ರಲ್ಲಿ85 ನೇ ವಯಸ್ಸಿನಲ್ಲಿ ರೂಪರ್ಟ್‌ ಮುರ್ಡೋಕ್‌ 65 ವರ್ಷದ ಮಾಡೆಲ್‌ ಜೆರ್ರಿ ಹಾಲ್‌ ಅವರನ್ನು ವಿವಾಹವಾಗಿದ್ದರು. ಈ ದಾಂಪತ್ಯ ಜೀವನವು ಕೇವಲ 6 ವರ್ಷಗಳ ಕಾಲ ನಡೆಯಿತು. 2022ರಲ್ಲಿಇಬ್ಬರೂ ಬೇರ್ಪಟ್ಟರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು