ಕ್ಯಾಲಿಫೋರ್ನಿಯಾ: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಾಡ್ಗಿಚ್ಚು ಸಂಭವಿಸಿದ್ದು, ಮೆರಿಪೊಸಾ ಕೌಂಟಿ ಪ್ರದೇಶದಲ್ಲಿ ಗವರ್ನರ್ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.
ಯೊಸೆಮಿಟ್ ರಾಷ್ಟ್ರೀಯ ಉದ್ಯಾನವನದ ಬಳಿ ಬೆಂಕಿ ವೇಗವಾಗಿ ಆವರಿಸುತ್ತಿದೆ ಎಂದು ವರದಿಯಾಗಿದೆ. ಅರಣ್ಯ ಸಮೀಪದಲ್ಲಿ ವಾಸಿಸುತ್ತಿದ್ದ ಸಾವಿರಾರು ಮಂದಿಯನ್ನು ಸ್ಥಳಾಂತರ ಮಾಡಲಾಗಿದ್ದು, 2,000ಕ್ಕೂ ಹೆಚ್ಚು ಮನೆಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ.
ಶುಕ್ರವಾರ ಅಪರಾಹ್ನ ಶುರುವಾಗಿರುವ ಕಾಡ್ಗಿಚ್ಚಿಗೆ ಎಕರೆ ಗಟ್ಟಲೆ ಪ್ರದೇಶ ನಾಶವಾಗಿದೆ ಎಂದು ಕ್ಯಾಲಿಫೋರ್ನಿಯಾ ಅರಣ್ಯ ಮತ್ತು ಅಗ್ನಿಶಾಮಕ ರಕ್ಷಣಾ ಇಲಾಖೆ ತಿಳಿಸಿದೆ.
6,000ಕ್ಕೂ ಹೆಚ್ಚು ನಾಗರಿಕರಿಗೆ ಸ್ಥಳಾಂತರ ಮಾಡುವ ಆದೇಶ ಹೊರಡಿಸಲಾಗಿದೆ ಎಂದು ಸಿಯೆರಾ ರಾಷ್ಟ್ರೀಯ ಅರಣ್ಯದ ವಕ್ತಾರ ಡ್ಯಾನಿಯಲ್ ಪ್ಯಾಟರ್ಸನ್ ತಿಳಿಸಿದ್ದಾರೆ.
400ಕ್ಕೂ ಹೆಚ್ಚು ಅಗ್ನಿಶಾಮಕದಳ, ಹೆಲಿಕಾಪ್ಟರ್, ವಿಮಾನಗಳ ಮೂಲಕ ಬೆಂಕಿ ನಂದಿಸುವ ಕಾರ್ಯಾಚರಣೆ ಜಾರಿಯಲ್ಲಿದೆ.
🚨#BREAKING: Explosive Wildfire breaks out in Mariposa CA
⁰📌#Mariposa l #CaliforniaMultiple firefighters and authorities are responding to a Explosive wild fire spreading dangerously fast in Mariposa as it has forced many residents to evacuate so far the fire is 0% contained pic.twitter.com/haBVmkG11F
— R A W S A L E R T S (@rawsalerts) July 23, 2022