Categories: ವಿದೇಶ

ಬಗ್ದಾದ್: ಪರ್ವತ ಶ್ರೇಣಿಯಲ್ಲಿ ಅಡಗಿದ್ದ 5 ಐಎಸ್‌ ಉಗ್ರರು ಹತ

ಬಗ್ದಾದ್: ಇರಾಕ್‌ನ ಪೂರ್ವ ಪ್ರಾಂತ್ಯದ ದಿಯಾಲಾದಲ್ಲಿ ನಡೆದ ವೈಮಾನಿಕ ದಾಳಿಯಲ್ಲಿ ಐವರು ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ಹತರಾಗಿದ್ದಾರೆ ಎಂದು ಇರಾಕ್ ಮಿಲಿಟರಿ ತಿಳಿಸಿದೆ.

ಗುಪ್ತಚರ ವರದಿಗಳ ಪ್ರಕರಾರ ಇರಾಕ್ ಯುದ್ಧವಿಮಾನಗಳು ಉತ್ತರ ದಿಯಾಲಾದ ಹಿಮ್ರೀನ್ ಪರ್ವತ ಶ್ರೇಣಿಯ ಬಳಿಯ ನರಿನ್ ಪರ್ವತ ಪ್ರದೇಶದಲ್ಲಿ ಐಎಸ್ ಅಡಗುತಾಣಗಳ ಮೇಲೆ ಎರಡು ವೈಮಾನಿಕ ದಾಳಿಗಳನ್ನು ನಡೆಸಿ ಅಡಗುತಾಣಗಳನ್ನು ನಾಶಪಡಿಸಿವೆ. ಐವರು ಐಎಸ್ ಉಗ್ರರನ್ನು ಕೊಂದಿವೆ ಎಂದು ಭದ್ರತಾ ಸಂಸ್ಥೆ ನೀಡಿದ ಹೇಳಿಕೆಯನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿದೆ.

ಐಎಸ್ ಅವಶೇಷಗಳ ವಿರುದ್ಧ ಪುನರಾವರ್ತಿತ ಮಿಲಿಟರಿ ಕಾರ್ಯಾಚರಣೆಗಳ ಹೊರತಾಗಿಯೂ,  ಉಗ್ರಗಾಮಿಗಳು ದಿಯಾಲಾ, ಸಲಾವುದ್ದೀನ್ ಮತ್ತು ಕಿರ್ಕುಕ್ ಪ್ರಾಂತ್ಯಗಳಲ್ಲಿನ ಮರುಭೂಮಿಗಳು ಮತ್ತು ಹಿಮ್ರೀನ್ ಪರ್ವತಗಳಲ್ಲಿ ಅಡಗಿಕೊಂಡಿದ್ದಾರೆ. 2017 ರಲ್ಲಿ ಐಎಸ್‌ನ ಸೋಲಿನ ನಂತರ, ಉಗ್ರಗಾಮಿ ಗುಂಪಿನ ಕೆಲವರು ನಗರ ಕೇಂದ್ರಗಳು, ಮರುಭೂಮಿಗಳು ಮತ್ತು ಪರ್ವತ ಪ್ರದೇಶಗಳಲ್ಲಿ ಅಡಗಿಕೊಂಡಿದ್ದು, ಭದ್ರತಾ ಪಡೆಗಳು ಮತ್ತು ನಾಗರಿಕರ ವಿರುದ್ಧ ಆಗಾಗ್ಗೆ ಗೆರಿಲ್ಲಾ ದಾಳಿಗಳನ್ನು ನಡೆಸುತ್ತಿವೆ.

Ashika S

Recent Posts

ಮೊದಲ ಬಾರಿಗೆ ಮರಾಠಿ ಭಾಷೆಯಲ್ಲಿ ಯಕ್ಷಗಾನ ಪ್ರದರ್ಶನ

ಕನ್ನಡದ ಹೆಮ್ಮೆಯ ಕಲೆ ಯಕ್ಷಗಾನ ಇದೀಗ ಗಡಿಗಳನ್ನು ದಾಟಿ ಮಹಾರಾಷ್ಟ್ರದ ಕಡೆಗೆ ಪಯಣ ಬೆಳೆಸಿದೆ. ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ…

10 mins ago

ತೃತೀಯ ಲಿಂಗಿಯ ಹತ್ಯೆ ಪ್ರಕರಣ: ಮಹಿಳೆಯ ಬಂಧನ

ತೃತೀಯ ಲಿಂಗಿಯನ್ನು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.

29 mins ago

ಬಿಗ್‌ಬಾಸ್‌ 16 ಸ್ಪರ್ಧಿ ʼಅಬ್ದು ರೋಝಿಕ್‌ʼಗೆ ಮದುವೆಯಂತೆ

ಬಿಗ್‌ಬಾಸ್‌ 16ನಲ್ಲಿ ಸ್ಪರ್ಧಿಸಿದ್ದ ಅಬ್ದು ರೋಝಿಕ್‌ ವಿಡಿಯೋವೊಂದನ್ನು ಸೋಷಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ತಾನೀಗ ಪ್ರೀತಿಗೆ ಬಿದ್ದಿದ್ದು, ಜುಲೈ 7ರಂದು ಮನಮೆಚ್ಚಿದ…

39 mins ago

ಕೆ.ಆರ್.ಪೇಟೆಯಲ್ಲಿ ಜೆಡಿಎಸ್ ನಿಂದ ಬೃಹತ್ ಪ್ರತಿಭಟನೆ

ಹಾಸನದ ಸಿ.ಡಿ.ಹಗರಣವನ್ನು ಸಿ.ಬಿ.ಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿಂದು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

54 mins ago

ಸೊಳ್ಳೆ ‘ಟ್ವೀಟ್ ಕಳುಹಿಸುವ’ ಫೋಟೋ ವೈರಲ್‌

ನಾವು ಪ್ರತಿದಿನ ಸೋಶಿಯಲ್‌ ಮಿಡಿಯಾಗಳಲ್ಲಿ ಹಲವಾರು ಟ್ವೀಟ್‌ಗಳು ಮತ್ತು ಪೋಸ್ಟ್ ಗಳನ್ನು ನೋಡುತ್ತೇವೆ.ಅದರಲ್ಲೂ ಕೆಲ ಪೋಸ್ಟ್‌ ಗಳು ನಮ್ಮನ್ನು ನಗುವಂತೆ…

1 hour ago

ಪಾಕಿಸ್ತಾನವನ್ನು ನಾವು ಗೌರವಿಸಬೇಕು ಎಂದ ಮಾಜಿ ಸಚಿವ ಮಣಿಶಂಕರ್ ಅಯ್ಯರ್‌

ಈ ಹಿಂದೆಯೂ ಪಾಕಿಸ್ತಾನವನ್ನು ಹಾಡಿಹೊಗಳಿ ವ್ಯಾಪಕ ಟೀಕೆಗೆ ಗುರಿಯಾಗಿದ್ದ ಕಾಂಗ್ರೆಸ್‌ ಮಾಜಿ ಸಚಿವ ಮಣಿಶಂಕರ್ ಅಯ್ಯರ್‌ ಈಗ ಮತ್ತೊಂದು ವಿವಾದಾತ್ಮಕ…

1 hour ago