ಬೀಜಿಂಗ್: ಬೀಜಿಂಗ್ನಲ್ಲಿ ಭಾರಿ ಮಳೆಯಿಂದಾಗಿ ಕನಿಷ್ಠ 33 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ. 33 ಮಂದಿ ಪ್ರವಾಹ ಮತ್ತು ಮನೆ ಕುಸಿತದಿಂದ ಸಾವನಪ್ಪಿದ್ದಾರೆ. ಲೈಫ್ ಗಾರ್ಡ್ಗಳು ಸೇರಿದಂತೆ 18 ಮಂದಿ ನಾಪತ್ತೆಯಾಗಿದ್ದಾರೆ ಎಂದು ಬೀಜಿಂಗ್ನ ಉಪ ಮೇಯರ್ ಕ್ಸಿಯಾ ಲಿನ್ಮಾವೊ ಸುದ್ದಿಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಡೋಕ್ಸುರಿ ಚಂಡಮಾರುತ ಪ್ರಭಾವದಿಂದ ಭಾರಿ ಮಳೆಯಾಗಿದ್ದು 140 ವರ್ಷಗಳ ಹಿಂದಿನ ದಾಖಲೆಯನ್ನು ಮುರಿದಿದೆ. ಮಳೆ, ಪ್ರವಾಹ 1.29 ಮಿಲಿಯನ್ ಜನರು ಮತ್ತು ಸುಮಾರು 15,000 ಹೆಕ್ಟೇರ್ ಬೆಳೆಗಳ ಮೇಲೆ ಪರಿಣಾಮ ಬೀರಿದೆ. ಧಾರಾಕಾರ ಮಳೆಯಿಂದಾಗಿ ಪರ್ವತ ಪ್ರದೇಶಗಳಲ್ಲಿನ ಮೂಲಸೌಕರ್ಯಗಳಿಗೆ ಗಮನಾರ್ಹ ಹಾನಿಯಾಗಿದೆ. 507 ಹಳ್ಳಿಗಳಲ್ಲಿ ನೀರಿನ ಪೂರೈಕೆಯ ಮೇಲೆ ಪರಿಣಾಮ ಬೀರಿದೆ. 273 ಗ್ರಾಮಗಳು ಮತ್ತು 16 ವಸತಿ ಸಮುದಾಯಗಳಲ್ಲಿ ವಿದ್ಯುತ್ ಕಡಿತವಾಗಿದೆ. 342 ಗ್ರಾಮಗಳಲ್ಲಿ ಸಂವಹನ ಅಸ್ತವ್ಯಸ್ತವಾಗಿದೆ. 256 ಗ್ರಾಮಗಳಲ್ಲಿ ಸಾರಿಗೆ ಸಂಚಾರ ಸ್ಥಗಿತಗೊಂಡಿದೆ ಎಂದು ಕ್ಸಿಯಾ ಲಿನ್ಮಾವೊ ತಿಳಿಸಿದ್ದಾರೆ.