ಮೊಗಾದಿಶು: ದಕ್ಷಿಣ ಸೊಮಾಲಿಯಾದ ಕ್ರೊಯೊಲಿ ಪಟ್ಟಣದ ಸಮೀಪವಿರುವ ಆಟದ ಮೈದಾನದಲ್ಲಿ ಬಾಂಬ್ ಸ್ಫೋಟಗೊಂಡ ಪರಿಣಾಮ ಕನಿಷ್ಠ 25 ಮಕ್ಕಳು ಸಾವನ್ನಪ್ಪಿದ್ದಾರೆ ಮತ್ತು ಹಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ಖಚಿತಪಡಿಸಿದ್ದಾರೆ.
ಹಳ್ಳಿಯೊಂದರ ತೆರೆದ ಮೈದಾನದಲ್ಲಿ ಮಕ್ಕಳು ಆಟವಾಡುತ್ತಿದ್ದ ಯುದ್ಧದ ಸ್ಫೋಟಕ ಅವಶೇಷ ಸಿಡಿದು ದುರಂತ ಸಂಭವಿಸಿದೆ ಎಂದು ಕ್ರೋಲಿ ಪಟ್ಟಣದ ಉಪ ಜಿಲ್ಲಾಧಿಕಾರಿ ಅಬ್ದಿ ಅಹ್ಮದ್ ಅಲಿ ಹೇಳಿದ್ದಾರೆ.
ಸ್ಥಳೀಯ ಆಸ್ಪತ್ರೆಯಲ್ಲಿ 22 ಮಕ್ಕಳ ಶವ ಇರಿಸಲಾಗಿದೆ. ಅದೇ ರೀತಿ ಮತ್ತಿಬ್ಬರು ಗಾಯಗೊಂಡವರು ಸಾವನಪ್ಪಿದ್ದಾರೆ ಎಂದು ಅಹ್ಮದ್ ಹೇಳಿದ್ದಾರೆ. ಮೃತಪಟ್ಟ ಮಕ್ಕಳು 10 ರಿಂದ 15 ವರ್ಷದೊಳಗಿನ ಹುಡುಗರು ಎಂದು ಅವರು ಹೇಳಿದರು.