ರಿಯಾದ್: ಈ ವರ್ಷ ಹಜ್ ಯಾತ್ರೆಯ ಸಮಯದಲ್ಲಿ ಶಾಖದ ಹೊಡೆತದಿಂದ 1721 ಮಂದಿ ಅನಾರೋಗ್ಯ ಪೀಡಿತರಾಗಿದ್ದಾರೆ ಎಂದು ಸೌದಿ ಅರೇಬಿಯಾದ ಆರೋಗ್ಯ ಸಚಿವಾಲಯ ದೃಢಪಡಿಸಿದೆ.
ಈ ವ್ಯಕ್ತಿಗಳಿಗೆ ಮೆಕ್ಕಾ ಮತ್ತು ಹೋಲಿ ಸೈಟ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಆಡಳಿತ ಹೇಳಿದೆ. ಯಾತ್ರಿಕರು ಪ್ರಯಾಣದ ವೇಳೆ ಛತ್ರಿ ಬಳಸುವುದು, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದ ಕಾರಣ ಸಮಸ್ಯೆ ಉಂಟಾಗಿದೆ ಎಂದು ಸಚಿವಾಲಯ ಹೇಳಿದೆ. ಈ ವರ್ಷದ ಹಜ್ ಋತುವಿನಲ್ಲಿ ತಾಪಮಾನದಲ್ಲಿ ಗಮನಾರ್ಹ ಏರಿಕೆ ಕಂಡು ಬಂದಿದೆ.
ಗುರುವಾರ, ಮೆಕ್ಕಾದಲ್ಲಿ ಗರಿಷ್ಠ ತಾಪಮಾನ 45 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಪವಿತ್ರ ಕ್ಷೇತ್ರವಾದ ಮಿನಾದಲ್ಲಿ 44 ಡಿಗ್ರಿ ಉಷ್ಣಾಂಶ ದಾಖಲಾಗಿದೆ.