News Karnataka Kannada
Monday, April 29 2024
ವಿದೇಶ

“ಅಲ್ಲಾಹು ಅಕ್ಬರ್” ಘೋಷಣೆ ಕೂಗುತ್ತಾ ವಿಮಾನ ನಿಲ್ದಾಣದ ಮೇಲೆ ದಾಳಿ

Airport attacked by chanting 'Allahu Akbar'
Photo Credit : Twitter

ರಷ್ಯಾ: ರಷ್ಯಾವು ಪ್ಯಾಲೇಸ್ಟಿನಿಯನ್​ಗೆ ಬೆಂಬಲವನ್ನು ನೀಡಿತ್ತು. ಇದರ ಪರಿಣಾಮ ರಷ್ಯಾದ ನೆಲದಲ್ಲಿ ಗಟ್ಟಿಯಾಗಿ ನಿಂತಿದೆ ಎಂಬುದಕ್ಕೆ ಈ ಘಟನೆಯೆ ಸಾಕ್ಷಿ. ಇಸ್ರೇಲ್‌ನಿಂದ ರಷ್ಯಾಕ್ಕೆ ವಿಮಾನವೊಂದು ಆಗಮಿಸುತ್ತಿದೆ ಎಂಬ ವದಂತಿ ಹರಡಿದೆ.

ವಿಮಾನವೊಂದು ರಷ್ಯಾದ ಡಾಗೆಸ್ತಾನ್ ಪ್ರಾಂತ್ಯದ ಮಖಚ್ಕಲಾ ವಿಮಾನ ನಿಲ್ದಾಣಕ್ಕೆ ಬಂದಿದೆ. ಈ ವಿಮಾನ ಇಸ್ರೇಲ್​​​ನಿಂದ ಬಂದಿದೆ, ವಿಮಾನದಲ್ಲಿ ಇಸ್ರೇಲ್​ ಪ್ರಜೆಗಳು ಹಾಗೂ ಯಹೂದಿಗಳಿದ್ದರೆ ಎಂಬ ಸುದ್ದಿಗಳು ಹರಡಿದೆ.

ಈ ಸುದ್ದಿ ತಿಳಿಯುತ್ತಿದ್ದಂತೆ ರಷ್ಯಾದಲ್ಲಿದ್ದ ಪ್ಯಾಲೇಸ್ಟಿನಿಯನ್ ಬೆಂಬಲಿಗರು ಪ್ಯಾಲೇಸ್ಟಿನಿಯನ್ ಧ್ವಜವನ್ನು ಹಿಡಿದುಕೊಂಡು ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿದ್ದಾರೆ. ಪ್ರತಿಭಟನೆ ಮಾಡುವ ವೇಳೆ ʼಅಲ್ಲಾಹು ಅಕ್ಬರ್ʼ ಎಂಬ ಘೋಷಣೆ ಹಾಕುತ್ತಿದ್ದರು ಎಂದು ಹೇಳಲಾಗಿದೆ.

ಈ ಬಗ್ಗೆ ಒಂದು ವಿಡಿಯೋ ಕೂಡ ಎಕ್ಸ್​​ನಲ್ಲಿ ವೈರಲ್​​​ ಆಗಿದೆ. ಈ ವಿಡಿಯೋದಲ್ಲಿ ವಿಮಾನದಲ್ಲಿ ಬಂದ ಪ್ರಯಾಣಿಕರನ್ನು ಪ್ರತಿಭಟನೆಕಾರರು ಪ್ರಶ್ನೆ ಮಾಡಿದ್ದಾರೆ, ನೀವು ಯಾರು? ಎಲ್ಲಿಂದ ಬಂದಿದ್ದು?, ಇನ್ನು ಪಾಸ್​​ಪೋರ್ಟ್​​ಗಳನ್ನು ತೋರಿಸುವಂತೆ ಒತ್ತಾಯಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್‌ ಆಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು