News Karnataka Kannada
Wednesday, May 01 2024
ವಿದೇಶ

ಮಾಸ್ಕೋ: ರಷ್ಯಾದ ಕೆಫೆಯೊಂದರಲ್ಲಿ ಅಗ್ನಿ ದುರಂತ, 13 ಸಾವು

ವಾಹನದಿಂದ ಪಟಾಕಿಗಳನ್ನು ಇಳಿಸುವಾಗ ಸಂಭವಿಸಿದ ಸ್ಫೋಟದಲ್ಲಿ  ಓರ್ವ ಸಾವನ್ನಪ್ಪಿ, ಹಲವರು ಗಾಯಗೊಂಡಿರುವ ಘಟನೆ ಕೇರಳದ ಚೂರಕ್ಕಾಡ್​ನಲ್ಲಿರುವ ಮನೆಯೊಂದರ ಬಳಿ ನಡೆದಿದೆ.
Photo Credit : Pixabay

ಮಾಸ್ಕೋ: ರಷ್ಯಾದ ಪಶ್ಚಿಮ ನಗರ ಕೊಸ್ಟ್ರೋಮಾದಲ್ಲಿ ಕೆಫೆಯೊಂದರಲ್ಲಿ ಶನಿವಾರ ಸಂಭವಿಸಿದ ಅಗ್ನಿ ದುರಂತದಲ್ಲಿ ಹದಿಮೂರು ಮಂದಿ ಸಾವನ್ನಪ್ಪಿದ್ದು, ಇತರ ನಾಲ್ವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಬೆಂಕಿಯಿಂದಾಗಿ ಒಟ್ಟು 250 ಜನರನ್ನು ಸ್ಥಳಾಂತರಿಸಲಾಗಿದೆ,  ಕೆಫೆಯಲ್ಲಿ ಸಂದರ್ಶಕರೊಬ್ಬರು ಹಾರಿಸಿದ ಪಟಾಕಿಗಳಿಂದ ಇದು ಸಂಭವಿಸಿರಬಹುದು ಎಂದು ಸ್ಥಳೀಯ ತುರ್ತು ಸೇವೆಗಳನ್ನು ಉಲ್ಲೇಖಿಸಿ ಸರ್ಕಾರಿ ಸ್ವಾಮ್ಯದ ಟಿಎಎಸ್ಎಸ್ ಸುದ್ದಿ ಸಂಸ್ಥೆಯನ್ನು ಉಲ್ಲೇಖಿಸಿ ಮಾಧ್ಯಮಗಳು  ವರದಿ ಮಾಡಿದೆ.

ಬೆಂಕಿಯು 3,500 ಚದರ ಮೀಟರ್ ಪ್ರದೇಶವನ್ನು ವ್ಯಾಪಿಸಿದ್ದು,  ಪರಿಣಾಮವಾಗಿ ಕೆಫೆಯ ಮೇಲ್ಛಾವಣಿಯೂ ಸಹ ಕುಸಿದಿದೆ. ಮಾಸ್ಕೋದಿಂದ ಈಶಾನ್ಯಕ್ಕೆ ಸುಮಾರು 350 ಕಿ.ಮೀ ದೂರದಲ್ಲಿ ಕೋಸ್ಟ್ರೋಮಾ ಇದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು