News Karnataka Kannada
Monday, April 29 2024
ವಿದೇಶ

ದೇಶೀಯ ಬೇಡಿಕೆಯನ್ನು ಪೂರೈಸಲು ಈರುಳ್ಳಿ ರಫ್ತನ್ನು ನಿಲ್ಲಿಸಿದ ಅಫ್ಘಾನಿಸ್ತಾನ

Untitled 2 Recovered Recovered Recovered
Photo Credit :

ಕಾಬೂಲ್: ಅಫ್ಘಾನಿಸ್ತಾನವು ತನ್ನ ಆಂತರಿಕ ಮಾರುಕಟ್ಟೆಗಳ ಬೇಡಿಕೆಗಳನ್ನು ಪೂರೈಸಲು ಈರುಳ್ಳಿ ರಫ್ತನ್ನು ನಿಲ್ಲಿಸಿದೆ.

ದೇಶಾದ್ಯಂತ ಬರಗಾಲದಿಂದಾಗಿ, ಈರುಳ್ಳಿ ಬೆಳೆಗಳು ಕುಸಿದಿವೆ, ಇದು ದೇಶದಲ್ಲಿಈರುಳ್ಳಿ ಬೆಲೆಗಳಲ್ಲಿ ಏರಿಕೆಗೆ ಕಾರಣವಾಗಿದೆ ಎಂದು ಚೇಂಬರ್ ಆಫ್ ಅಗ್ರಿಕಲ್ಚರ್ ಅಂಡ್ ಲೈವ್ಸ್ಟಾಕ್ ಶುಕ್ರವಾರ ಹೇಳಿಕೆಯಲ್ಲಿ ತಿಳಿಸಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಅಫ್ಘಾನಿಸ್ತಾನದಲ್ಲಿ ಈಗ 7 ಕೆಜಿ ಈರುಳ್ಳಿಯ ಬೆಲೆ 200 ಎಎಫ್ಎಸ್ ಆಗಿರುವುದರಿಂದ ವಿದೇಶಗಳಿಗೆ ಈರುಳ್ಳಿ ರಫ್ತು ಮಾಡುವುದನ್ನು ನಿಲ್ಲಿಸಲಾಗಿದೆ. ಎಂದು ಚೇಂಬರ್ ನ ಸದಸ್ಯ ಮಿರ್ವೈಸ್ ಹಾಜಿಜಾದಾ ಹೇಳಿದರು.

ಅಫ್ಘಾನಿಸ್ತಾನವು ಪಾಕಿಸ್ತಾನ, ಭಾರತ, ರಷ್ಯಾ ಮತ್ತು ಮಧ್ಯ ಏಷ್ಯಾದ ರಾಷ್ಟ್ರಗಳಿಗೆ ಈರುಳ್ಳಿಯನ್ನು ರಫ್ತು ಮಾಡುತ್ತಿತ್ತು. 7 ಕೆಜಿ ಈರುಳ್ಳಿಯ ಬೆಲೆ ಸಾಮಾನ್ಯವಾಗಿ ವರ್ಷದ ಈ ಸಮಯದಲ್ಲಿ ಸುಮಾರು 30 ಅಫ್ಸ್ ಆಗಿತ್ತು.

ಈರುಳ್ಳಿ ಮಾರಾಟಗಾರ ಬಖ್ತಿಯಾರ್ ಅವರ ಪ್ರಕಾರ, ಈ ವರ್ಷ ಮಳೆಯ ಕೊರತೆಯು ಬರ ಪರಿಸ್ಥಿತಿಗಳನ್ನು ಪ್ರಚೋದಿಸಿತು, ಇದು ಅಫ್ಘಾನಿಸ್ತಾನದಾದ್ಯಂತ ಕಡಿಮೆ ಬೆಳೆ ಇಳುವರಿಗೆ ಕಾರಣವಾಯಿತು ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
30409

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು