ಸಿರಿಯಾ : ನೆರೆಯ ದೇಶ ಸಿರಿಯಾದಿಂದ ಒಳನುಗ್ಗಲು ಯತ್ನಿಸಿದ 27 ಶಂಕಿತ ಮಾದಕ ದ್ರವ್ಯ ಮಾರಾಟಗಾರರನ್ನು ಜೋರ್ಡಾನ್ ಸೇನೆ ಹತ್ಯೆ ಮಾಡಿದೆ.ಅತಿಕ್ರಮ ಪ್ರದೇಶದ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜೋರ್ಡಾನ್ ಈಗಾಗಲೇ ಪ್ರಕಟಿಸಿದೆ.
ಇದರಂತೆ ದೇಶಕ್ಕೆ ಒಳನುಸುಳಲು ಯತ್ನಿಸಿದ 27 ಮಂದಿಯನ್ನು ಹೊಡೆದುರುಳಿಸಲಾಗಿದೆ ಎಂದು ಜೋರ್ಡಾನ್ ಹೇಳಿದೆ.
ಸಿರಿಯಾದಲ್ಲಿ ಆಂತರಿಕ ಕಲಹ ಆರಂಭಗೊಂಡ ಬಳಿಕ ಅಲ್ಲಿ ಮಾದಕ ದ್ರವ್ಯ ವ್ಯಾಪಾರ ಹೆಚ್ಚಾಗಿದೆ. ಅಲ್ಲಿಂದ ವಿಶ್ವದ ಇತರ ಪ್ರದೇಶಗಳಿಗೆ ಮಾದಕ ದ್ರವ್ಯ ಪೂರೈಸಲಾಗುತ್ತಿದೆ ಎಂದು ಆರೋಪಿಸಲಾಗಿದೆ