News Karnataka Kannada
Wednesday, May 01 2024
ವಿದೇಶ

ಸಾಮಾಜಿಕ ಜಾಲತಾಣ ಸ್ಥಗಿತಕ್ಕೆ ನಿಖರವಾದ ಕಾರಣ ಇಲ್ಲಿದೆ

Social Media
Photo Credit :
ವಾಷಿಂಗ್ಟನ್ :  ಸೋಮವಾರ ರಾತ್ರಿ ಏಕಾಏಕಿ ತಮ್ಮ ಸೇವೆಯನ್ನು ಸ್ಥಗಿತಗೊಳಿಸುವ ಮೂಲಕ ವಿಶ್ವದಾದ್ಯಂತ ಜಗತ್ತಿಗೆ ಡಿಜಿಟಲ್‌ ಶಾಕ್‌ ನೀಡಿದ್ದ ವಿಶ್ವದ ಅತ್ಯಂತ ಜನಪ್ರಿಯ ಸಾಮಾಜಿಕ ಜಾಲತಾಣಗಳಾದ ಫೇಸ್‌​ಬುಕ್‌ , ಇನ್‌​ಸ್ಟಾಗ್ರಾಂ ಹಾಗೂ ವಾಟ್ಸಾಪ್, ತಮ್ಮ ಸೇವೆಯ ಸ್ಥಗಿ​ತಕ್ಕೆ ಕೆಲವು ಕಾರಣ ನೀಡಿ​ವೆ.

‘ಕಾನ್ಫಿಗರೇಷನ್ ಚೇಂಜ್‌’ ಮಾಡು​ವಾಗ ಸಮಸ್ಯೆ ಉಂಟಾಗಿತ್ತು ಎಂದು ಸಮಸ್ಯೆಯ ಕಾರಣವನ್ನು ಫೇಸ್‌ಬುಕ್‌ ಹೇಳಿ​ದೆ. ಅಂದರೆ ಫೇಸ್‌ಬುಕ್‌ನ ವಿವಿಧ ಡಾಟಾ ಸೆಂಟರ್‌ಗಳ ನಡುವಿನ ಸಂವಹನವನ್ನು ನಿರ್ವಹಿಸುವ ಬ್ಯಾಕ್‌ಬೋನ್‌ ರೂಟ​ರ್‍ಸ್ನ ಸಂರಚನೆ (ಕಾನ್ಫಿಗರೇಷನ್‌) ದೋಷದಿಂದಾಗಿ ಈ ಸಮಸ್ಯೆ ಉಂಟಾಗಿತ್ತು ಎಂಬುದು ಕಂಪನಿ ಹೇಳಿಕೆ.

ಸೈಬರ್‌ ತಜ್ಞರ ಪ್ರಕಾರ, ಬಾರ್ಡರ್‌ ಗೇಟ್‌ವೇ ಪ್ರೊಟೋಕಾಲ್‌ (ಬಿಜಿಪಿ) ಸಮಸ್ಯೆಯೇ ಈ ತಾಂತ್ರಿಕ ದೋಷಕ್ಕೆ ಕಾರಣ.

ಇದನ್ನು ವಿಸ್ತರಿಸಿ ಹೇಳುವುದಾದರೆ, ಇಂಟರ್ನೆಟ್‌ ಅಥವಾ ಅಂತರ್ಜಾಲ ವ್ಯವಸ್ಥೆ ನಡೆಯುವುದು ಒಂದು ಶಿಷ್ಟಾಚಾರದ ಅನ್ವಯ. ಇಂಟರ್ನೆಟ್‌ ಅನ್ನುವುದು ಹಲವು ಜಾಲಗಳ ಒಂದು ಗುಚ್ಛವಾಗಿರುವ ಕಾರಣ, ಈ ಎಲ್ಲಾ ಗುಚ್ಛಗಳನ್ನು ಜೋಡಿಸುವ ಕೆಲಸವನ್ನು ಬಿಜಿಪಿ ಮಾಡುತ್ತದೆ. ಬಿಜಿಪಿ ಕೆಲಸ ಮಾಡದೇ ಹೋದಾಗ, ಇಂಟರ್ನೆಟ್‌ ರೂಟರ್‌ಗಳಿಗೆ ಏನು ಮಾಡಬೇಕು ಎಂದು ತಿಳಿಯುವುದಿಲ್ಲ. ಹೀಗಾಗಿ ಅವು ಕೆಲಸ ಮಾಡುವುದನ್ನು ಸ್ಥಗಿತಗೊಳಿಸುತ್ತವೆ. ಇಲ್ಲಿ ಫೇಸ್‌ಬುಕ್‌ ವಿಷಯದಲ್ಲೂ ಅದೇ ಆಗಿದ್ದು, ಫೇಸ್‌ಬುಕ್‌ನ ಬಿಜಿಪಿಯಲ್ಲಿ ತೊಂದರೆಯಾದ ಕಾರಣ, ತಾನು ಇಂಟರ್ನೆಟ್‌ನಲ್ಲಿ ಇದ್ದೇನೆ ಎಂಬ ವಿಷಯವನ್ನು ಇಂಟರ್ನೆಟ್‌ನ ಗುಚ್ಛದಲ್ಲಿ ಇರುವ ಇತರಿಗೆ ತಿಳಿಸುವುದು ಫೇಸ್‌ಬುಕ್‌ಗೆ ಸಾಧ್ಯವಾಗಲಿಲ್ಲ.

ಯಾವುದೇ ಕಂಪನಿಗಳು ಕಾಲಕಾಲಕ್ಕೆ ಮಾಡಿದ ಬದಲಾವಣೆಗಳನ್ನು ಬಿಜಿಪಿ ರೂಟರ್‌ಗಳಿಗೆ ತಿಳಿಸುತ್ತದೆ. ಶನಿವಾರ ಫೇಸ್‌ಬುಕ್‌ ಹಲವಾರು ಬದಲಾವಣೆಗಳನ್ನು ಮಾಡಿತ್ತು ಮತ್ತು ನಂತರ ಅವುಗಳನ್ನು ರದ್ದುಪಡಿಸಿತ್ತು. ಇದೂ ಕೂಡ ಸಮ​ಸ್ಯೆಗೆ ಕಾರಣ ಎನ್ನ​ಲಾ​ಗಿ​ದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 1 / 5. Vote count: 1

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು