ವಾಷಿಂಗ್ಟನ್ : ಕೋವಿಡ್ದಿಂದಾಗಿ ಅಮೆರಿಕದಲ್ಲಿ ಅಸುನೀಗಿ ದವರ ಸಂಖ್ಯೆ 7 ಲಕ್ಷಕ್ಕೆ ಏರಿದೆ. ಮೂರೂವರೆ ತಿಂಗಳ ಹಿಂದೆ ಅಂದರೆ ಜೂನ್ ಮಧ್ಯದಲ್ಲಿ ದೇಶದಲ್ಲಿ ಕೊರೊನಾದಿಂದಾಗಿ ಮೃತರ ಸಂಖ್ಯೆ 6 ಲಕ್ಷ ದಾಟಿತ್ತು.
ಅದಾದ ಅನಂತರ ಡೆಲ್ಟಾ ರೂಪಾಂತರಿಯಿಂದಾಗಿ ಸಾವಿನ ಸಂಖ್ಯೆಯಲ್ಲಿ ಏರಿಕೆ ಕಂಡಿದೆ. ಪ್ರತೀ ದಿನ 1,500-2,500 ಮಂದಿ ಸೋಂಕಿಗೆ ಬಲಿಯಾಗುತ್ತಿದ್ದಾರೆ.
ಅಮೆರಿಕದಲ್ಲಿ ಇದುವರೆಗೆ 70 ಮಿಲಿಯ ಮಂದಿಗೆ ಇನ್ನೂ ಲಸಿಕೆ ನೀಡಲಾಗಿಲ್ಲ ಎನ್ನುವುದು ಗಮನಾರ್ಹ. ಇದೇ ವೇಳೆ ಜಾಗತಿಕವಾಗಿ ಕೊರೊನಾಗೆ ಸಾವಿಗೀಡಾದವರ ಸಂಖ್ಯೆ 48 ಲಕ್ಷ ದಾಟಿದೆ .