News Karnataka Kannada
Saturday, May 04 2024
ವಿದೇಶ

ಸತತ ಮೂರನೇ ದಿನವೂ ರಷ್ಯಾದಲ್ಲಿ 37, 156 ಹೊಸ ಸೋಂಕು ದಾಖಲೆಯ ಸಾವು ವರದಿ

Corona Main Newsk 5059978686
Photo Credit :

ಮಾಸ್ಕೋ: ಸತತ ಮೂರನೇ ದಿನವಾದ ಶುಕ್ರವಾರವೂ ದಾಖಲೆ ಸಂಖ್ಯೆಯ ಕೋವಿಡ್-19 ಸಾವುಗಳನ್ನು ರಷ್ಯಾದ ಅಧಿಕಾರಿಗಳು ವರದಿ ಮಾಡಿದ್ದಾರೆ.37, 156 ಹೊಸ ಸೋಂಕು ಪ್ರಕರಣಗಳನ್ನು ಟಾಸ್ಕ್ ಫೋರ್ಸ್ ವರದಿ ಮಾಡಿದೆ. ಇತ್ತೀಚಿನ ವಾರಗಳಲ್ಲಿ ದಿನನಿತ್ಯದ ಹೊಸ ಸೋಂಕುಗಳು ಇಳಿಮುಖವಾದ ಟ್ರೆಂಡ್ ನತ್ತ ಸಾಗಿದೆ. ಆದರೆ ಸೋಂಕು ಉಲ್ಬಣ ಹಿಂದಿಗಿಂತ ಈಗ ಹೆಚ್ಚಾಗುತ್ತಿದೆ.

ಬುಧವಾರ 1,247 ಗುರುವಾರ 1,251 ಸಾವಿನ ಸಂಖ್ಯೆಯನ್ನು ವರದಿ ಮಾಡಿದ್ದ ರಷ್ಯಾ ಸ್ಟೇಟ್ ಕೊರೋನಾವೈರಸ್ ಟಾಸ್ಕ್ ಫೋರ್ಸ್ ಶುಕ್ರವಾರ 1, 254 ಸಾವು ಕುರಿತು ವರದಿ ಮಾಡಿದೆ.

ಮುಂಜಾಗ್ರತಾ ಕ್ರಮ ಅನುಸರಿಸುವಲ್ಲಿ ಜನರ ನಿರ್ಲಕ್ಷ್ಯ ಹಾಗೂ ಕಡಿಮೆ ಲಸಿಕಾ ದರದ ನಡುವೆ ಹೊಸದಾಗಿ ಸೋಂಕು ಹಾಗೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬರುತ್ತಿದೆ. ವಿಶ್ವದ ಬಹುತೇಕ ರಾಷ್ಟ್ರಗಳಿಗಿಂತ ಹಲವು ತಿಂಗಳು ಮುಂಚಿತವಾಗಿಯೇ ಸ್ವದೇಶಿ ನಿರ್ಮಿತ ಕೋವಿಡ್-19 ಲಸಿಕೆಗೆ ಅನುಮೋದನೆ ನೀಡಿದ್ದರೂ ರಷ್ಯಾದ ಸುಮಾರು 146 ಮಿಲಿಯನ್ ಜನರಲ್ಲಿ ಶೇಕಡಾ 40 ಕ್ಕಿಂತ ಕಡಿಮೆ ಜನರು ಸಂಪೂರ್ಣವಾಗಿ ಲಸಿಕೆಯನ್ನು ಪಡೆದಿದ್ದಾರೆ.

ಒಟ್ಟಾರೆಯಾಗಿ, ಕೊರೋನಾವೈರಸ್ ಕಾರ್ಯಪಡೆ 9.2 ದಶಲಕ್ಷಕ್ಕೂ ಹೆಚ್ಚು ಸೋಂಕುಗಳನ್ನು ದೃಢಪಡಿಸಿದ್ದು, 261,000 ಕ್ಕೂ ಹೆಚ್ಚು ಕೋವಿಡ್-19 ಸಾವುಗಳನ್ನು ವರದಿ ಮಾಡಿದೆ. ಇದು ಯುರೋಪಿನಲ್ಲಿ ಅತಿ ಹೆಚ್ಚು ಸಾವಿನ ಸಂಖ್ಯೆಯಾಗಿದೆ.
ನಿಜವಾದ ಅಂಕಿ ಅಂಶವು ಇನ್ನೂ ಹೆಚ್ಚಿನದಾಗಿದೆ ಎಂದು ಕೆಲವು ತಜ್ಞರು ನಂಬುತ್ತಾರೆ. ಈ ವರ್ಷದ ಸೆಪ್ಟೆಂಬರ್ ಮತ್ತು ಏಪ್ರಿಲ್ 2020ರ ನಡುವೆ 462,000 ಜನರು ಕೋವಿಡ್ ನಿಂದ ಸಾವನ್ನಪ್ಪಿರುವುದಾಗಿ ಅವರು ಹೇಳುತ್ತಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು