News Karnataka Kannada
Thursday, May 02 2024
ವಿದೇಶ

ಸಂಕಷ್ಟದಲ್ಲಿದ್ದ ಮಹಿಳೆಗೆ ಉದ್ಯೋಗ ಕೊಡಿಸಿ, ಲ್ಯಾಪ್‌ಟಾಪ್ ನೀಡಿದ ಅಪರಿಚಿತ ವ್ಯಕ್ತಿ

Photo Credit : IANS

ಸಾಮಾಜಿಕ‌ ಜಾಲತಾಣದ ಬಗ್ಗೆ ಸಮಾಜದಲ್ಲಿ ನೂರೆಂಟು ಆಕ್ಷೇಪಗಳು ಉಂಟು. ಹಾಗೆಯೇ ಒಳಿತೂ ಕೂಡ ಇದೆ. ಟಿಕ್‌ಟಾಕ್‌ನಲ್ಲಿ ತನ್ನ‌ ಜೀವನದ ಹೋರಾಟಗಳನ್ನು ಹಂಚಿಕೊಂಡ ನಂತರ ಮಹಿಳೆ ನೆರವಿಗೆ ಬಂದ ಅಪರಿಚಿತ ವ್ಯಕ್ತಿ ಆಕೆಗೆ  ಉದ್ಯೋಗ ಕೊಡಿಸಿ, ಲ್ಯಾಪ್‌ಟಾಪ್ ನೀಡಿರುವ ಅಚ್ಚರಿಯ ಪ್ರಸಂಗ ಯುಎಸ್‌ನಲ್ಲಿ ನಡೆದಿದೆ.

ನ್ಯೂಯಾರ್ಕ್‌ನಲ್ಲಿ ವಾಸಿಸುವ 27 ವರ್ಷದ ಕರ್ಟ್ನಿ ಎಂಬಾಕೆ ಈ ಸಂಗತಿ ಹಂಚಿಕೊಂಡಿದ್ದಾರೆ. ಆಕೆ ಮತ್ತು ಅವಳ ಸಂಗಾತಿ ಇಬ್ಬರೂ ಒಂದೇ ವಾರದಲ್ಲಿ ತಮ್ಮ ಕೆಲಸ ಕಳೆದುಕೊಂಡರು ವಾಸಿಸಲು ಸ್ಥಳವಿಲ್ಲದೆ, ಆಕೆಯ ಸಹೋದರಿಯೊಂದಿಗೆ ತೆರಳಿದರು. ಆದರೆ ಅಲ್ಲಿ ಸರಿ ಬಾರದೇ ರಸ್ತೆಗೆ ಬರಬೇಕಾಯಿತು.

ಕರ್ಟ್ನಿ ತನ್ನ ಕಷ್ಟಗಳನ್ನು ತನ್ನ ಟಿಕ್‌ಟಾಕ್ ಖಾತೆಯಲ್ಲಿನ ವೀಡಿಯೊಗಳ ಮೂಲಕ ಹಂಚಿಕೊಂಡಿದ್ದು, ಇರಲು ಮನೆ ಇಲ್ಲದೇ ದಂಪತಿ ಉದ್ಯಾನವನಗಳಲ್ಲಿ ಮಲಗಿದ್ದರಂತೆ.

ಅಕೆಯ ಪ್ರಯತ್ನಗಳು ಅಂತಿಮವಾಗಿ ಫಲ ನೀಡಿತು, ನ್ಯೂಯಾರ್ಕರ್ ಚೆಲ್ಸಿ ಬ್ರೌನ್ ಅವಳಿಗೆ ಸಹಾಯ ಮಾಡಲು ಮುಂದಾದರು. ಕರ್ಟ್ನಿಯ ಕಥೆ ಕೇಳಿ 28 ವರ್ಷದ ಚೆಲ್ಸಿ ಅವಳಿಗೆ ಲ್ಯಾಪ್‌ಟಾಪ್ ನೀಡಿದಳು, ಅದು ಅವಳ ವರ್ಚುವಲ್ ಕೆಲಸಕ್ಕೆ ಸಹಾಯ ಮಾಡುತ್ತಿದೆ.

ಜನರು ಹಣ ಅಥವಾ ವಸ್ತುಗಳನ್ನು ಕಳುಹಿಸಲು ಒಲವು ತೋರುತ್ತಾರೆ ಎಂದು ನನಗೆ ತಿಳಿದಿದೆ, ಆದರೆ ನಾನು ಅವಕಾಶ ಕಲ್ಪಿಸಲು ಬಯಸುತ್ತೇನೆ ಚೆಲ್ಸಿ ಹೇಳಿಕೊಂಡಿದ್ದಳು. ಆ ಪ್ರಕಾರವೇ ನೆರವಿಗೆ ಬಂದಿದ್ದು, ಹೊಸ ಲ್ಯಾಪ್‌ಟಾಪ್‌ನಿಂದ ಕರ್ಟ್ನಿಯು ಚೆಲ್ಸಿಯ ಹರ್ಲೂಮ್ ಪ್ರಾಜೆಕ್ಟ್‌ಗೆ ಚೆಂದದ ಬ್ಲಾಗ್ ಪೋಸ್ಟ್‌ಗಳನ್ನು ಬರೆಯುತ್ತಾರೆ.

ಜಾಲತಾಣದ ಒಂದು ಪೋಸ್ಟ್ ಲ್ಯಾಪ್ ಟಾಪ್ ಜೊತೆಗೆ ಕೆಲಸವನ್ನು ಹುಡುಕಿಕೊಟ್ಟಿರುವುದು ಸೋಜಿಗದ ಸಂಗತಿಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು