News Karnataka Kannada
Friday, May 03 2024
ವಿದೇಶ

ಶ್ರೀಲಂಕಾ: ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಬಂಧನ ಕೋರಿ ಕೋರ್ಟ್‌ಗೆ ಅರ್ಜಿ

Mahinda Rajapaksa
Photo Credit :

ಕೊಲಂಬೊ: ಸರ್ಕಾರದ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದವರ ವಿರುದ್ಧ ಬೆದರಿಕೆ ಹಾಕಿದ, ದಾಳಿಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ ಮತ್ತು ಇತರ ಆರು ಮಂದಿಯನ್ನು ತಕ್ಷಣವೇ ಬಂಧಿಸಲು ಅಪರಾಧ ತನಿಖಾ ದಳಕ್ಕೆ (ಸಿಐಡಿ) ನಿರ್ದೇಶಿಸಬೇಕೆಂದು ಶುಕ್ರವಾರ ಶ್ರೀಲಂಕಾದ ನ್ಯಾಯಾಲಯದಲ್ಲಿ ಮೊಕದ್ದಮೆ ದಾಖಲಿಸಲಾಗಿದೆ.

ಈ ಬಗ್ಗೆ ಸ್ಥಳೀಯ ಮಾಧ್ಯಮಗಳು ವರದಿ ಪ್ರಕಟಿಸಿವೆ. ಈ ಬಗ್ಗೆ ಕೊಲಂಬೊ ಮ್ಯಾಜಿಸ್ಟ್ರೇಟ್ ಕೋರ್ಟ್‌ನಲ್ಲಿ ವಕೀಲ ಸೆನಕ ಪೆರೆರಾ ಎಂಬುವವರು ವೈಯಕ್ತಿಕ ದೂರು ದಾಖಲಿಸಿದ್ದಾರೆ.

ದೇಶದ ಆರ್ಥಿಕ ದುಸ್ಥಿತಿಯ ಹೊಣೆಯನ್ನು ಮಹಿಂದಾ ರಾಜಪಕ್ಸ ಹೊರಬೇಕು, ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದವರ ಮೇಲೆ ರಾಜಪಕ್ಸ ಬೆಂಬಲಿಗರು ದಾಳಿ ನಡೆಸಿದ್ದರು.ಈ ವೇಳೆ 9 ಮಂದಿ ಮೃತಪಟ್ಟು, 200ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು.

ಅರ್ಜಿ ಮೇ 17 ರಂದು ಕೊಲಂಬೊ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ವಿಚಾರಣೆಗೆ ಬರಲಿದೆ ಎಂದು ಕೊಲಂಬೊ ಫೋರ್ಟ್ ಮ್ಯಾಜಿಸ್ಟ್ರೇಟ್ ತಿಳಿನಾ ಗಮಾಗೆ ಹೇಳಿದರು.

ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ, ಸಂಸದರಾದ ಜಾನ್‌ಸ್ಟೊನ್‌ ಫೆರ್ನಾಂಡೋ, ಸಂಜೀವ ಎದಿರಿಮನ್ನೆ, ಸನತ್ ನಿಶಾಂತ ಮತ್ತು ಮೊರಟುವಾ ಮುನ್ಸಿಪಲ್ ಕೌನ್ಸಿಲ್ ಅಧ್ಯಕ್ಷ ಸಮನ್ ಲಾಲ್ ಫೆರ್ನಾಂಡೋ, ಹಿರಿಯ ಪೊಲೀಸ್ ಅಧಿಕಾರಿಗಳಾದ ದೇಶಬಂದು ತೆನ್ನಕೋನ್ ಮತ್ತು ಚಂದನಾ ವಿಕ್ರಮರತ್ನ ಅವರನ್ನು ತಕ್ಷಣ ಬಂಧಿಸಬೇಕೆಂದು ಅರ್ಜಿಯಲ್ಲಿ ಕೋರಲಾಗಿದೆ.

1948ರಲ್ಲಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ಶ್ರೀಲಂಕಾ ಇದೇ ಮೊದಲ ಬಾರಿಗೆ ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು