News Karnataka Kannada
Thursday, May 02 2024
ವಿದೇಶ

ಶೆಲ್‌ದಾಳಿಯಿಂದ ಝಪೊರಿಝ್ಹಿಯ ಪರಮಾಣು ವಿದ್ಯುತ್‌ ಸ್ಥಾವರಕ್ಕೆ ಬೆಂಕಿ

Russia War
Photo Credit : Twitter

ಕೀವ್‌: ಶುಕ್ರವಾರ ಬೆಳಗಿನ ಜಾವ ರಷ್ಯಾ ಪಡೆ ನಡೆಸಿದ ಶೆಲ್‌ದಾಳಿಯಿಂದ ಝಪೊರಿಝ್ಹಿಯ ಪರಮಾಣು ವಿದ್ಯುತ್‌ ಸ್ಥಾವರಕ್ಕೆ ಬೆಂಕಿ ಬಿದ್ದಿದೆ. ಇದು ಯೂರೋಪ್‌ನ ಅತಿದೊಡ್ಡ ಪರಮಾಣು ವಿದ್ಯುತ್‌ ಸ್ಥಾವರ ಎನ್ನಲಾಗಿದೆ.

ಸಮೀಪದ ಎನೆರ್‌ಗೊಡರ್‌ ನಗರದ ಮೇಯರ್‌ ಝಪೊರಿಝ್ಯಾ ಪರಮಾಣು ವಿದ್ಯುತ್‌ ಸ್ಥಾವರವು ರಷ್ಯಾ ದಾಳಿಗೆ ತುತ್ತಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದಾರೆ ಎಂದು ಸುದ್ದಿ ಸಂಸ್ಥೆ ‘ಎಎಫ್‌ಪಿ’ ವರದಿ ಮಾಡಿದೆ.
ಉಕ್ರೇನ್‌ನ ಆಗ್ನೇಯ ಭಾಗದಲ್ಲಿರುವ ಪರಮಾಣು ಸ್ಥಾವರದ ಸಮೀಪ ಉಕ್ರೇನ್‌ ಮತ್ತು ರಷ್ಯಾ ಪಡೆಯ ನಡುವೆ ಯುದ್ಧ ನಡೆಯುತ್ತಿದೆ ಎಂದು ಮೇಯರ್‌ ಡಿಮಿಟ್ರೊ ಒರ್‌ಲೊವ್‌ ಅವರು ಇದಕ್ಕೂ ಮೊದಲು ತಿಳಿಸಿದ್ದರು.

‘ಝಪೊರಿಝ್ಯಾ ಪರಮಾಣು ವಿದ್ಯುತ್‌ ಸ್ಥಾವರದ ಘಟಕಗಳ ಮೇಲೆ ಮತ್ತು ಕಟ್ಟಡಗಳ ಮೇಲೆ ನಿರಂತರವಾಗಿ ಶತ್ರುಗಳು ಶೆಲ್‌ದಾಳಿ ನಡೆಸಿದ್ದರ ಪರಿಣಾಮ ಅಗ್ನಿ ಅನಾಹುತ ಸಂಭವಿಸಿದೆ. ಇದರಿಂದ ವಿಶ್ವದ ಭದ್ರತೆಗೆ ಅಪಾಯವಿದೆ’ ಎಂದು ಓರ್‌ಲೊವ್‌ ಅವರು ಟೆಲಿಗ್ರಾಮ್‌ ಚಾನೆಲ್‌ ಒಂದಕ್ಕೆ ತಿಳಿಸಿದ್ದಾರೆ. ಅವರು ಹೆಚ್ಚಿನ ಮಾಹಿತಿಯನ್ನು ನೀಡಿಲ್ಲ.

ರಷ್ಯಾ ಪಡೆ ಪರಮಾಣು ಸ್ಥಾವರಗಳನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ. ಇದಕ್ಕಾಗಿ ಯುದ್ಧ ಟ್ಯಾಂಕ್‌ಗಳನ್ನು ನಗರಕ್ಕೆ ಸಾಗಿಸುತ್ತಿದೆ ಎಂದು ಉಕ್ರೇನ್‌ನ ಅಧಿಕಾರಿಗಳು ಇದಕ್ಕೂ ಮೊದಲು ಮಾಹಿತಿ ನೀಡಿದ್ದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು