News Karnataka Kannada
Tuesday, May 07 2024
ವಿದೇಶ

ಶಾಂತಿ ಮಾತುಕತೆಗೆ ಒಪ್ಪಿದ ರಷ್ಯಾ- ಉಕ್ರೇನ್ : ಟರ್ಕಿಯಲ್ಲಿಂದು ಸಂಧಾನ ಸಭೆ

Russia Ukrean
Photo Credit :

ಉಕ್ರೇನ್‌ ಮೇಲೆ ರಷ್ಯಾದ ಮಿಲಿಟರಿ ಕಾರ್ಯಾಚರಣೆ ಆರಂಭಗೊಂಡು 32 ದಿನಗಳು ಕಳೆದಿದೆ. ಎರಡೂ ದೇಶಗಳ ನಡುವೆ ಘನಘೋರ ಕದನ ನಡೆಯುತ್ತಿದೆ. ಆ ಎರಡು ರಾಷ್ಟ್ರಗಳ ನಡುವೆ ಕದನ ನಡೆಯುತ್ತಿದ್ದರೂ ಅದರ ಪರಿಣಾಮಗಳು ಇಡೀ ವಿಶ್ವದ ಮೇಲೆ ತಟ್ಟಿದೆ. ಈ ನಡುವೆ ಮಹತ್ವದ ಬೆಳವಣಿಗೆ ನಡೆದಿದ್ದು, ಸೋಮವಾರ ಟರ್ಕಿಯಲ್ಲಿ ಎರಡನೇ ಸುತ್ತಿನ ಸಂಧಾನ ಮಾತುಕತೆಗೆ ಎರಡೂ ದೇಶಗಳು ಒಪ್ಪಿಕೊಂಡಿವೆ.

ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ನೇತೃತ್ವದಲ್ಲಿ28 – 30 ರಂದು ರಷ್ಯಾ- ಉಕ್ರೇನ್​ ನಡುವೆ ಸಂಧಾನ ಮಾತುಕತೆ ನಡೆಯಲಿದೆ. ಕೀವ್‌ ಮತ್ತು ಮಾಸ್ಕೋದ ಸಂಧಾನ ಕಾರರು ಟರ್ಕಿಯ ಇಸ್ತಾಂಬುಲ್​​ ನಗರದಲ್ಲಿ ಶಾಂತಿ ಮಾತುಕತೆ ನಡೆಸಲಿದ್ದಾರೆ.

ರಷ್ಯಾ ಅಧ್ಯಕ್ಷ ಪುಟಿನ್‌ ಹಾಗೂ ಟರ್ಕಿ ಅಧ್ಯಕ್ಷ ಎರ್ಡೋರ್ಗನ್‌ ನಡುವೆ ಭಾನುವಾರ ನಡೆದು ದೂರವಾಣಿ ಸಂಭಾಷಣೆ ವೇಳೆ ಸಂಧಾನ ಮಾತುಕತೆಗೆ ಒಪ್ಪಿಕೊಳ್ಳಲಾಗಿದೆ. ರಷ್ಯಾ – ಉಕ್ರೇನ್ ಸಂಘರ್ಷದ ಕುರಿತಂತೆ ಉಭಯ ನಾಯಕರು ಚರ್ಚಿಸಿದರು.

ಈ ವೇಳೆ ಮುಂದಿನ ಸಭೆಯನ್ನು ಇಸ್ತಾಂಬುಲ್​ನಲ್ಲಿ ನಡೆಸಲು ರಷ್ಯಾ ಅಧ್ಯಕ್ಷ ಪುಟಿನ್ ಒಪ್ಪಿಕೊಂಡಿದ್ದಾರೆ ಎಂದು ಟರ್ಕಿ ಅಧ್ಯಕ್ಷ ಎರ್ಡೋರ್ಗನ್‌ ಹೇಳಿಕೆ ನೀಡಿದ್ದಾರೆ. ಮಾರ್ಚ್ 28 – 30 ರಂದು ಟರ್ಕಿಯಲ್ಲಿ ಮುಂದಿನ ಸುತ್ತಿನ ಮಾತುಕತೆ ನಡೆಸಲು ನಿರ್ಧರಿಸಲಾಗಿದೆ ಎಂದು ಉಕ್ರೇನ್‌ ನ ಸಂಧಾನಕಾರ ಅರಾಖಮಿಯಾ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ. ರಷ್ಯಾ ಸಂಧಾನ ತಂಡದ ಮುಖ್ಯಸ್ಥ ವ್ಲಾಡಿಮಿರ್ ಮೆಡಿನ್ಸ್ಕಿ ಸಹ ಈ ವಿಚಾರವನ್ನು ದೃಢಪಡಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12792
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು