Categories: ವಿದೇಶ

ವಿಮಾನ ಅಪಘಾತ, ನಾಲ್ಕು ಸಾವು

ಅಮೇರಿಕ : ಅಟ್ಲಾಂಟಾದ ಈಶಾನ್ಯ ಭಾಗದ ಉಪನಗರದಲ್ಲಿರುವ ವಿಮಾನ ನಿಲ್ದಾಣದಿಂದ ಹಾರಾಟ ಆರಂಭಿಸಿದ (ಟೇಕ್‌ ಆಫ್‌) ಲಘು ವಿಮಾನವೊಂದು, ಅದೇ ಪ್ರದೇಶದಲ್ಲಿ ಅಪಘಾತಕ್ಕೀಡಾಗಿದೆ. ಈ ದುರಂತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಸಿಂಗಲ್ ಎಂಜಿನ್‌ ಸೆಸ್ಸಾನಾ 210 ವಿಮಾನವು ಶುಕ್ರವಾರ ಮಧ್ಯಾಹ್ನ 1.10ರ ಸುಮಾರಿಗೆ ಡೆಕಾಲ್ಬ್-ಪೀಚ್ ಟ್ರೀ ವಿಮಾನ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ, ಬೆಂಕಿ ಹೊತ್ತಿಕೊಂಡಿತು ಎಂದು ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ ತಿಳಿಸಿದೆ.

‘ವಿಮಾನದಲ್ಲಿದ್ದ ನಾಲ್ವರು ಮೃತಪಟ್ಟಿದ್ದಾರೆ‘ ಎಂದು ಕೌಂಟಿ ಅಗ್ನಿಶಾಮಕ ದಳದ ವಕ್ತಾರರು ತಿಳಿಸಿದ್ದಾರೆ.

ಕೌಂಟಿ ಒಡೆತನದ ವಿಮಾನ ನಿಲ್ದಾಣದ ರನ್‌ವೇನಲ್ಲಿ ಈ ವಿಮಾನ ಅಪಘಾತಕ್ಕೀಡಾಯಿತು. ವಿಮಾನ ಕೆಳಗೆ ಬಿದ್ದಕೂಡಲೇ ಬೆಂಕಿ ಹೊತ್ತುಕೊಂಡಿತು. ತಕ್ಷಣ 15 ಮಂದಿ ಅಗ್ನಿಶಾಮಕ ಸಿಬ್ಬಂದಿ ರನ್‌ ವೇ ಕಡೆಗೆ ಓಡಿದರು. ತ್ವರಿತಗತಿಯಲ್ಲಿ ಬೆಂಕಿ ನಂದಿಸಿದರು ಎಂದು ಕೌಂಟಿ ಅಗ್ನಿಶಾಮಕ ಅಧಿಕಾರಿ, ಕ್ಯಾಪ್ಟನ್ ಜೇಸನ್ ಡೇನಿಯಲ್ಸ್ ಸ್ಥಳೀಯ ಪತ್ರಿಕೆಗೆ ತಿಳಿಸಿದ್ದಾರೆ. ಅಪಘಾತದಲ್ಲಿ ಮೃತಪಟ್ಟವರ ಹೆಸರನ್ನು ಅಧಿಕಾರಿಗಳು ತಕ್ಷಣಕ್ಕೆ ಬಹಿರಂಗಪಡಿಸಲಿಲ್ಲ.

Raksha Deshpande

Recent Posts

ಕೆಎಸ್ಆರ್​ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನ ಡಿಕ್ಕಿ: ಓರ್ವ ಸಾವು

ಮಧುಗಿರಿ ತಾಲೂಕಿನ ದಂಡಿಪುರದ ವಿಜಯಾನಂದಿ ಕ್ರಾಸ್ ಬಳಿ  ಕೆಎಸ್ಆರ್​ಟಿಸಿ ಬಸ್ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ…

7 mins ago

ನಕಲಿ ಮಸಾಲೆ ಪದಾರ್ಥಗಳನ್ನು ತಯಾರಿಕೆ : ಮೂವರ ಬಂಧನ, 15 ಟನ್‌ ವಶ

ನಕಲಿ ಮಸಾಲೆ ಪದಾರ್ಥಗಳ ತಯಾರಿಕೆಯಲ್ಲಿ ತೊಡಗಿದ್ದ ಮೂವರನ್ನು ಬಂಧಿಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ಅವರಿಂದ 15 ಟನ್​ ನಕಲಿ ಮಸಾಲೆ…

10 mins ago

ಮುಂಬೈ ವಿಮಾನ ನಿಲ್ದಾಣದಲ್ಲಿ 12.47 ಕೆ.ಜಿ ಚಿನ್ನ, 10 ಮಂದಿ ಆರೋಪಿಗಳು ವಶಕ್ಕೆ

ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ₹8.37 ಕೋಟಿ ಮೌಲ್ಯದ 12.47 ಕೆ.ಜಿ ಚಿನ್ನ ಮತ್ತು ಎಲೆಕ್ಟ್ರಾನಿಕ್‌ ವಸ್ತುಗಳನ್ನು ಕಸ್ಟಮ್ಸ್‌ ಇಲಾಖೆ ಸಿಬ್ಬಂದಿ…

12 mins ago

ಸಮಂತಾ ನಗ್ನ ಫೋಟೋ ವೈರಲ್; ಸ್ವತಃ ಶೇರ್ ಮಾಡಿ ಡಿಲೀಟ್ ಮಾಡಿದ್ರಾ‌

ನಟಿ ಸಮಂತಾ ಬಾತ್‌ಟಬ್‌ನಲ್ಲಿ ಕುಳಿತಿರುವ ನಗ್ನ ಫೋಟೋವೊಂದು ವೈರಲ್ ಆಗಿದ್ದು, ಚಿತ್ರ ಶೇರ್ ಆದ ಕೊಂಚ ಹೊತ್ತಲ್ಲೇ ಡಿಲೀಟ್ ಆಗಿದೆ.…

38 mins ago

ವಿಶ್ವಕಪ್‌ ಗೆದ್ದರೆ, ತಂಡದ ಪ್ರತಿ ಆಟಗಾರನಿಗೆ 1 ಲಕ್ಷ US ಡಾಲರ್‌ ಘೋಷಣೆ ಮಾಡಿದ ಪಾಕ್‌

ಆರ್ಥಿಕ ಬಿಕ್ಕಟ್ಟಿನಲ್ಲಿರುವ ಪಾಕಿಸ್ತಾನ ದಯನೀಯ ಸ್ಥಿತಿ ತಲುಪಿದ್ದರು, ಕ್ರಿಕೆಟ್‌ ಆಟಗಾರರಿಗೆ ಬಂಪರ್‌ ಬಹುಮಾನ ಘೋಷಣೆ ಮಾಡಿದೆ. 

39 mins ago

ಸ್ಟೇರಿಂಗ್‌ ಕಟ್ ಆಗಿ ಗದ್ದೆಗೆ ನುಗ್ಗಿದ ಕೆಎಸ್‌ಆರ್‌ಟಿಸಿ ಬಸ್‌ : 30 ಪ್ರಯಾಣಿಕರಿಗೆ ಗಾಯ

ಕೆಎಸ್‌ಆರ್‌ಟಿಸಿ ಬಸ್‌ವೊಂದರ ಸ್ಟೇರಿಂಗ್‌ ಕಟ್ ಆಗಿ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದ ಘಟನೆ ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ…

1 hour ago