News Karnataka Kannada
Thursday, May 02 2024
ವಿದೇಶ

ರಾಜತಾಂತ್ರಿಕತೆಯಲ್ಲಿ ರಷ್ಯಾ ಗಂಭೀರವಾಗಿ ತೊಡಗುವ ಲಕ್ಷಣ ಕಾಣುತ್ತಿಲ್ಲ: ಕಮಲಾ ಹ್ಯಾರಿಸ್

Kamala Haris
Photo Credit : Twitter

ವಾಷಿಂಗ್ಟನ್: ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಉಕ್ರೇನ್‌ ಜೊತೆಗಿನ ಸಂಘರ್ಷದ ಕುರಿತಂತೆ ‘ಗಂಭೀರ ರಾಜತಾಂತ್ರಿಕತೆಯಲ್ಲಿ ತೊಡಗುವ ಕುರಿತಂತೆ ಯಾವುದೇ ಲಕ್ಷಣ ತೋರಿಸುತ್ತಿಲ್ಲ’ಎಂದು ಅಮೆರಿಕದ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಹೇಳಿದ್ದಾರೆ.

‘ರಾಜತಾಂತ್ರಿಕತೆಯು ಸಮಸ್ಯೆಗಳನ್ನು ಪರಿಹರಿಸುವ ಮಾರ್ಗವಾಗಿದೆ. ರಷ್ಯಾವು ಆ ನಿಟ್ಟಿನಲ್ಲಿ ಸಕ್ರಿಯವಾಗಿರಬೇಕು. ನಮ್ಮ ಮಿತ್ರ ರಾಷ್ಟ್ರಗಳು ರಷ್ಯಾದ ನಡವಳಿಕೆಯನ್ನು ಗಮನಿಸಬೇಕು’ಎಂದು ರೊಮೇನಿಯಾದ ಬುಕಾರೆಸ್ಟ್‌ನ ಸುದ್ದಿಗೋಷ್ಠಿಯಲ್ಲಿ ಹ್ಯಾರಿಸ್ ತಿಳಿಸಿದ್ದಾರೆ.

‘ಅಮೆರಿಕವು ರಾಜತಾಂತ್ರಿಕತೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದೆ. ಆದರೆ, ಪುಟಿನ್ ಅವರು ಗಂಭೀರವಾಗಿ ತೊಡಗುವ ಯಾವುದೇ ಲಕ್ಷಣವನ್ನು ತೋರಿಸುತ್ತಿಲ್ಲ’ಎಂದು ಹ್ಯಾರಿಸ್ ಹೇಳಿದ್ದಾರೆ.

ಉಕ್ರೇನ್‌ನ ಬಂದರು ನಗರವಾದ ಮರಿಯುಪೋಲ್‌ನಲ್ಲಿರುವ ಹೆರಿಗೆ ಆಸ್ಪತ್ರೆಯ ಮೇಲೆ ನಡೆದ ದಾಳಿಯಿಂದಾಗಿ ಮಗು ಸೇರಿದಂತೆ ಕನಿಷ್ಠ ಮೂವರು ಮೃತಪಟ್ಟಿದ್ದನ್ನು ಉಲ್ಲೇಖಿಸಿದ ಅವರು, ‘ನಾಗರಿಕರನ್ನು ಗುರಿಯಾಗಿಸಿಕೊಂಡು ನಡೆಸುವ ಯಾವುದೇ ಉದ್ದೇಶಪೂರ್ವಕ ದಾಳಿಯು ಯುದ್ಧಾಪರಾಧವಾಗಿದೆ’ ಎಂದು ಹೇಳಿದರು.

ಸಂಘರ್ಷ ಪ್ರಾರಂಭವಾದಾಗಿನಿಂದ ಉಕ್ರೇನ್‌ನಲ್ಲಿನ ಆರೋಗ್ಯ ಸೌಲಭ್ಯಗಳ ಮೇಲೆ 26 ದಾಳಿಗಳು ಮತ್ತು ಕನಿಷ್ಠ 12 ಸಾವುಗಳು ಸಂಭವಿಸಿರುವ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು ಮಾಹಿತಿ ಕಲೆಹಾಕಿದೆ.

ಹ್ಯಾರಿಸ್ ಈ ವಾರ ನ್ಯಾಟೊ ಮಿತ್ರರಾಷ್ಟ್ರಗಳಾದ ಪೋಲೆಂಡ್ ಮತ್ತು ರೊಮೇನಿಯಾಗೆ ಭೇಟಿ ನೀಡಿದ್ದು, ಉಕ್ರೇನ್‌ನೊಂದಿಗಿನ ಆಯಾ ಗಡಿಗಳಲ್ಲಿ ಸಂಘರ್ಷ ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಈ ದೇಶಗಳಿಗೆ ಅಮೆರಿಕದ ಬೆಂಬಲ ಸೂಚಿಸಿದ್ಧಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು