News Karnataka Kannada
Monday, April 29 2024
ವಿದೇಶ

ರಷ್ಯಾ ಶೆಲ್ ದಾಳಿ: 10 ಸಾವು, 35 ಮಂದಿಗೆ ಗಾಯ: ಉಕ್ರೇನ್ ಒಳಾಡಳಿತ ಸಚಿವಾಲಯ

Ukraine War
Photo Credit : Twitter

ಖಾರ್ಕಿವ್: ಉಕ್ರೇನ್ ನ ಎರಡನೇ ದೊಡ್ಡ ನಗರ ಖಾರ್ಕಿವ್ ನಲ್ಲಿ ಮಂಗಳವಾರ ನಡೆದ ಶೆಲ್ ದಾಳಿಯಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದು, 35 ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್ ನ ಒಳಾಡಳಿತ ಸಚಿವಾಲಯದ ಸಲಹೆಗಾರ ಆಂಟನ್ ಹೆರಾಶ್ಚೆಂಕೊ ಹೇಳಿದ್ದಾರೆ.

ಉಕ್ರೇನ್ ಸ್ಟೇಟ್ ಎಮರ್ಜೆನ್ಸಿ ಸರ್ವೀಸಸ್ ಕೂಡಾ ಇಂದು ಸಾಮಾಜಿಕ ಜಾಲತಾಣವೊಂದರಲ್ಲಿ ಫೋಸ್ಟ್ ವೊಂದನ್ನು ಮಾಡುವ ಮೂಲಕ ಸಾವಿನ ಸಂಖ್ಯೆಯನ್ನು ಖಚಿತಪಡಿಸಿದೆ. ರಕ್ಷಣಾ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಎಲ್ಲಾ ಮಹಡಿಗಳಲ್ಲಿನ ಮೆಟ್ಟಿಲುಗಳು ಮತ್ತು ಭಾಗಶ: ಕಾರಿಡಾರ್ ಗಳು ಸಂಪೂರ್ಣವಾಗಿ ನಾಶವಾಗಿರುವುದಾಗಿ ಪೋಸ್ಟ್ ನಲ್ಲಿ ಉಲ್ಲೇಖಿಸಲಾಗಿದೆ.

ರಷ್ಯಾದ ಕ್ರೂಸ್ ಕ್ಷಿಪಣಿ ಖಾರ್ಕಿವ್ ನ ಮಧ್ಯಭಾಗದಲ್ಲಿರುವ ಫ್ರೀಡಂ ಸ್ಕ್ವೇರ್ ಗೆ ಅಪ್ಪಳಿಸಿದೆ. ಐದಾರು ನಿಮಿಷದಲ್ಲಿ ರಕ್ಷಣಾ ಸಿಬ್ಬಂದಿ ಆಗಮಿಸಿದ ನಂತರ ಇದೇ ರೀತಿಯಲ್ಲಿ ಎರಡನೇ ರಾಕೆಟ್ ಕಟ್ಟಡವೊಂದಕ್ಕೆ ಅಪ್ಪಳಿಸಿದೆ. ಆಡಳಿತ ಕಟ್ಟಡದ ಮೂರನೇ ಒಂದು ಭಾಗ ಕುಸಿದಿದೆ ಎಂದು ಅವರು ತಿಳಿಸಿರುವುದಾಗಿ ವರದಿಯಾಗಿದೆ.

ಈ ಮಧ್ಯೆ ಉಕ್ರೇನ್ ನಲ್ಲಿನ ವಸತಿ ಪ್ರದೇಶಗಳು, ಮೂಲಸೌಕರ್ಯಗಳ ಮೇಲಿನ ದಾಳಿ ಕುರಿತ ವರದಿಯನ್ನು ರಷ್ಯಾದ ಅಧ್ಯಕ್ಷೀಯ ಪತ್ರಿಕಾ ಕಾರ್ಯದರ್ಶಿ ಡಿಮಿಟ್ರಿ ಪೆಸ್ಕೋವ್ ನಿರಾಕರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು