ಢಾಕ: ದಕ್ಷಿಣ ಬಾಂಗ್ಲಾದೇಶದ ನದಿಯೊಂದರಲ್ಲಿ ಪ್ರಯಾಣಿಕರು ಮತ್ತು ಸರಕುಗಳನ್ನು ಸಾಗಿಸುತ್ತಿದ್ದ ಬಾರ್ಜ್ಗೆ ಬೆಂಕಿಹೊತ್ತಿಕೊಂಡ ಪರಿಣಾಮ ಕನಿಷ್ಠ 32 ಮಂದಿ ಮೃತಪಟ್ಟಿದ್ದಾರೆ.ಈವರೆಗೆ 32 ಮೃತದೇಹಗಳನ್ನು ಹೊರತೆಗೆಯಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಹೆಚ್ಚಿನವರು ಬೆಂಕಿಯಿಂದಾಗಿ ಮೃತಪಟ್ಟರೆ ಇನ್ನು ಕೆಲವರು ನದಿಗೆ ಹಾರಿದ್ದರಿಂದ ಸಾವಿಗೀಡಾಗಿದ್ದಾರೆ’ ಎಂದು ಸ್ಥಳೀಯ ಪೊಲೀಸ್ ಅಧಿಕಾರಿ ಮೊಯಿನುಲ್ ಇಸ್ಲಾಂ ತಿಳಿಸಿದ್ದಾರೆ.
‘ಮೂರು ಮಹಡಿಯ ಬಾರ್ಜ್ನಲ್ಲಿ ನದಿಯ ಮಧ್ಯಭಾಗದಲ್ಲಿದ್ದಾಗ ಬೆಂಕಿಹೊತ್ತಿಕೊಂಡಿತ್ತು.
ಹೆಚ್ಚಿನ ವಿವರ ಇನ್ನಷ್ಟೇ ತಿಳಿಯಬೇಕಿದೆ.