News Karnataka Kannada
Thursday, May 02 2024
ವಿದೇಶ

ರಷ್ಯಾ-ಉಕ್ರೇನ್ ಸಮರ: ಮರಿಯುಪೋಲ್ ಥಿಯೇಟರ್ ಮೇಲೆ ಬಾಂಬ್ ದಾಳಿ

Keev War
Photo Credit :

ಕೀವ್: ಉಕ್ರೇನ್‌ನ ಆಗ್ನೇಯ ಭಾಗದಲ್ಲಿರುವ ಮರಿಯುಪೋಲ್ ನಗರದ ರಂಗ ಮಂದಿರದಲ್ಲಿ ರಷ್ಯಾ ಬುಧವಾರ ಬಾಂಬ್ ದಾಳಿ ನಡೆಸಿದೆ.ಪರಿಣಾಮ 1300ಕ್ಕೂ ಹೆಚ್ಚು ಜನರು ಅವಶೇಷಗಳಡಿ ಸಿಲುಕಿದ್ದಾರೆಂದು ತಿಳಿದುಬಂದಿದೆ.ಉಕ್ರೇನ್​ನ ಒಂಬುಡ್ಸ್‌ಮನ್ ಲ್ಯುಡ್ಮಿಲಾ ಡೆನಿಸೋವಾ ನೀಡಿರುವ ಮಾಹಿತಿ ಪ್ರಕಾರ, ದಾಳಿಯಲ್ಲಿ ಮರಿಯುಪೋಲ್ ಡ್ರಾಮಾ ಥಿಯೇಟರ್ ಅವಶೇಷಗಳಡಿ ಸಿಲುಕಿರುವ 130 ಜನರನ್ನು ರಕ್ಷಿಸಲಾಗಿದೆ ಎಂದು ಮಾಹಿತಿ ನೀಡಿದೆ.

ಇನ್ನೂ ಹೆಚ್ಚಿನ ಜನರು ಅವಶೇಷಗಳ ಅಡಿ ಸಿಲುಕಿಕೊಂಡಿದ್ದಾರೆ ಎಂದು ದಿ ಕೈವ್ ಇಂಡಿಪೆಂಡೆಂಟ್ ವರದಿ ಮಾಡಿದೆ ಎನ್ನಲಾಗುತ್ತಿದೆ.

ಉಕ್ರೇನ್‍ನ ಹಲವು ಜನ ಈ ಥಿಯೇಟರ್‌ನ ಅಂಡರ್ ಗ್ರೌಂಡ್‍ನಲ್ಲಿ ಆಶ್ರಯ ಪಡೆದಿದ್ದರು. ಇದನ್ನು ಗುರಿಯಾಗಿಸಿ ರಷ್ಯಾ ಸೇನೆ ದಾಳಿ ನಡೆಸಿದೆ ಎಂದು ಹೇಳಲಾಗುತ್ತಿದೆ.

ನಾಶವಾದ ಕಟ್ಟಡದ ಚಿತ್ರವನ್ನು ಹಂಚಿಕೊಂಡಿರುವ ಮರಿಯುಪೋಲ್ ಸಿಟಿ ಕೌನ್ಸಿಲ್, ರಷ್ಯಾದ ಪಡೆಗಳು ಮರಿಯುಪೋಲ್ ಹೃದಯಭಾಗದಲ್ಲಿರುವ ನಾಟಕ ರಂಗಮಂದಿರವನ್ನು ಉದ್ದೇಶಪೂರ್ವಕವಾಗಿ ನಾಶಪಡಿಸಿವೆ ಎಂದು ಹೇಳಿದೆ.

ಥಿಯೇಟರ್ ಮೇಲೆ ಬಾಂಬ್ ದಾಳಿಯಾಗುತ್ತಿದ್ದಂತೆ ದಟ್ಟ ಹೊಗೆ ಬರಲಾರಂಭಿಸಿದೆ. ಸಾವು – ನೋವುಗಳ ಸಂಖ್ಯೆಯನ್ನು ಸ್ಥಳೀಯ ಅಧಿಕಾರಿಗಳು ಇನ್ನೂ ಖಚಿತಪಡಿಸಿಲ್ಲ. ಅವಶೇಷಗಳಡಿ ಸಿಲುಕಿರುವವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12795
News Karnataka Kannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು