News Karnataka Kannada
Wednesday, May 08 2024
ವಿದೇಶ

ಯುದ್ಧದಲ್ಲಿ ಮಡಿದವರ ಮೃತದೇಹಗಳನ್ನು ಉಕ್ರೇನ್ ಗೆ ಮರಳಿಸಿದ ರಷ್ಯಾ

Untitled 219
Photo Credit :

ಉಕ್ರೇನ್​​: ರಷ್ಯಾವು ಮರಿಯುಪೋಲ್​ನ ದಾಳಿಯಲ್ಲಿ ಮೃತರಾದ 210 ಸೈನಿಕರ ದೇಹವನ್ನು ಉಕ್ರೇನ್​ಗೆ ಕಳುಹಿಸಿದೆ ಎಂದು ಉಕ್ರೇನ್‌ನ ಮಿಲಿಟರಿ ಗುಪ್ತಚರ ಸಂಸ್ಥೆ ಹೇಳಿದೆ.

ಅವುಗಳಲ್ಲಿ ಅಜೋವ್‌ಸ್ಟಲ್ ಉಕ್ಕಿನ ಸ್ಥಾವರದ ಮೇಲೆ ರಷ್ಯಾ ದಾಳಿ ಮಾಡಿದಾಗ ಮೃತಪಟ್ಟ ಸೈನಿಕರ ದೇಹ ಎಂದು ಸಂಸ್ಥೆ ಹೇಳಿದೆ.

ಸ್ಥಾವರದ ಅವಶೇಷಗಳಲ್ಲಿ ಇನ್ನೂ ಎಷ್ಟು ಮೃತ ದೇಹಗಳಿವೆ ಎಂಬುದರ ಬಗ್ಗೆ ಉಕ್ರೇನ್‌ನ ಮಿಲಿಟರಿ ಗುಪ್ತಚರ ಸಂಸ್ಥೆ ಮಂಗಳವಾರ ಸ್ಪಷ್ಟಪಡಿಸಿಲ್ಲ. ನಾಶವಾದ ಬಂದರು ನಗರವನ್ನು ರಷ್ಯಾ ಈಗ ನಿಯಂತ್ರಿಸುತ್ತಿದೆ.

ಕಳೆದ ವಾರದಿಂದ ಮೃತ ದೇಹಗಳನ್ನು ಹಿಂತಿರುಗಿಸುವ ಪ್ರಕ್ರಿಯೆ ಆರಂಭವಾಯಿತು. ಉಕ್ರೇನ್ ಮತ್ತು ರಷ್ಯಾ ಶನಿವಾರದಂದು 320 ಶವಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಎರಡು ರಾಷ್ಟ್ರಗಳು 160 ದೇಹಗಳನ್ನು ಮರಳಿ ಪಡೆದಿವೆ.

ಉಕ್ರೇನಿಯನ್ ಹೋರಾಟಗಾರರು ಸುಮಾರು ಮೂರು ತಿಂಗಳ ಕಾಲ ಉಕ್ಕಿನ ಸ್ಥಾವರದಿಂದ ಹೋರಾಟ ನಡೆಸಿದ್ದರು. ಆದರೆ, ಮೇ ತಿಂಗಳಲ್ಲಿ ರಷ್ಯಾವು ಭೂ, ಸಮುದ್ರ ಮತ್ತು ವಾಯು ಪಡೆಗಳ ಮೂಲಕ ದಾಳಿ ಮಾಡಿ ಮರಿಯುಪೋಲ್ ಪ್ರದೇಶವನ್ನು ಸಹ ವಶಪಡಿಸಿಕೊಂಡಿತ್ತು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು