ದುಬೈ: ಮಂಕಿಪಾಕ್ಸ್ ಒಂದೊಂದೇ ದೇಶಕ್ಕೆ ಕಾಲಿಡುತ್ತಿದೆ. ಈ ನಡುವೆ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಮಂಕಿಪಾಕ್ಸ್ನ ಇನ್ನೂ ಮೂರು ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.
ಗಲ್ಫ್ ರಾಜ್ಯದ ಮೊದಲ ವೈರಸ್ ಪ್ರಕರಣವನ್ನು ಘೋಷಿಸಿದ ಸುಮಾರು ಒಂದು ವಾರದ ನಂತರ ಮತ್ತೆ ಮೂರು ಪ್ರಕರಣಗಳು ದಾಖಲಾಗಿವೆ.
ಇನ್ನೂ ಸೋಂಕಿತ ವ್ಯಕ್ತಿಗಳ ಬಗ್ಗೆ ಸಚಿವಾಲಯ ಯಾವುದೇ ವಿವರಗಳನ್ನು ಬಹಿರಂಗಪಡಿಸಿಲ್ಲ. ಈ ಮೊದಲ ಪ್ರಕರಣವು 29 ವರ್ಷದ ಮಹಿಳೆ ಪಶ್ಚಿಮ ಆಫ್ರಿಕಾದಿಂದ ದೇಶಕ್ಕೆ ಭೇಟಿ ನೀಡಿದ್ದ ವೇಳೆ ಪತ್ತೆಯಾಗಿತ್ತು.