News Karnataka Kannada
Monday, April 29 2024
ವಿದೇಶ

ಮುಸ್ಲಿಂಮರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯುಂಟು ಮಾಡಬಾರದು; ಜೋ ಬೈಡನ್

Us elections: 10 Indian-Americans win
Photo Credit :

ವಾಷಿಂಗ್ಟನ್ : ವಿಶ್ವದಾದ್ಯಂತ ಮುಸ್ಲಿಮರು ಹಿಂಸಾಚಾರದ ಮೂಲಕ ಗುರಿಯಾಗುತ್ತಿದ್ದಾರೆ. ಹಲವು ಸವಾಲುಗಳು ಹಾಗೂ ಬೆದರಿಕೆಗಳನ್ನು ಎದುರಿಸುತ್ತಿರುವಾಗಲೂ ಮುಸ್ಲಿಮರು ನಮ್ಮ ರಾಷ್ಟ್ರವನ್ನು ಬಲಿಷ್ಠಗೊಳಿಸುತ್ತಿದ್ದಾರೆ ಎಂದು ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಳವಳ ವ್ಯಕ್ತಪಡಿಸಿದ್ದಾರೆ.

ಈದ್‌-ಉಲ್‌ ಫಿತ್ರ್‌ ಆಚರಣೆ ಪ್ರಯುಕ್ತ ಶ್ವೇತಭವನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ‘ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಕ್ಕಾಗಿ ರಾಯಭಾರಿಯಾಗಿ ಸೇವೆ ಸಲ್ಲಿಸಲು ವ್ಯಕ್ತಿಯೊಬ್ಬರನ್ನು ನೇಮಿಸಲಾಗಿದೆ’ ಎಂದು ಹೇಳಿದ್ದಾರೆ.

‘ವಿಶ್ವದಾದ್ಯಂತ ಮುಸ್ಲಿಮರನ್ನು ಹಿಂಸಾಚಾರಕ್ಕೆ ಗುರಿಪಡಿಸುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ತುಳಿತಕ್ಕೊಳಗಾದವರ ವಿರುದ್ಧ ಯಾರೂ ಕೂಡ ತಾರತಮ್ಯ ಮಾಡಬಾರದು. ಜೊತೆಗೆ ಮುಸ್ಲಿಂಮರ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆಯುಂಟು ಮಾಡಬಾರದು’ ಎಂದು ಬೈಡನ್ ತಿಳಿಸಿದ್ದಾರೆ.

‘ರೋಹಿಂಗ್ಯಾಗಳು ಸೇರಿದಂತೆ ಹಿಂಸೆ, ಸಂಘರ್ಷಗಳನ್ನು ಎದುರಿಸುತ್ತಿರುವ ಎಲ್ಲರನ್ನು ಒಳಗೊಂಡಂತೆ ಈ ಪವಿತ್ರ ದಿನವನ್ನು ಆಚರಿಸಲು ಸಾಧ್ಯವಾಗದ ಎಲ್ಲರನ್ನು ನಾವು ಸ್ಮರಿಸುತ್ತೇವೆ’ ಎಂದು ಬೈಡನ್ ಹೇಳಿದ್ದಾರೆ. ಇದೇ ವೇಳೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಈದ್‌-ಉಲ್‌ ಫಿತ್ರ್‌ ಅಂಗವಾಗಿ ಶುಭ ಹಾರೈಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು