News Karnataka Kannada
Friday, May 03 2024
ವಿದೇಶ

ಮಹಿಳೆಯರ 32 ವಿವಿಧ ಹಕ್ಕುಗಳು ವಾಪಾಸ್ ತೆಗೆದುಕೊಳ್ಳಲು ನಿರ್ಧಾರ : ತಾಲಿಬಾನ್

Taliban
Photo Credit :

ಕಾಬೂಲ್: ಅಫ್ಗಾನಿಸ್ತಾನದ ಹ್ಯೂಮನ್ ರೈಟ್ಸ್ ವಾಚ್ (ಎಚ್‌ಆರ್‌ಡಬ್ಲ್ಯೂ) ಸಂಗ್ರಹಿಸಿರುವ ಹೊಸ ಪಟ್ಟಿಯ ಪ್ರಕಾರ, ತಾಲಿಬಾನ್‌ಗಳು ಕನಿಷ್ಠ 32 ವಿವಿಧ ವಿಭಾಗಗಳಲ್ಲಿ ಮಹಿಳೆಯರು ಮತ್ತು ಬಾಲಕಿಯರ ಹಕ್ಕುಗಳನ್ನು ಹಿಂಪಡೆಯಲು ನಿರ್ಧರಿಸಿದ್ದಾರೆ.

ಇದರಲ್ಲಿ, ಶಿಕ್ಷಣದ ಹಕ್ಕಿಗೆ ನಿರ್ಬಂಧ ಹೇರಿರುವುದು ಅತ್ಯಂತ ದೊಡ್ಡ ತಾರತಮ್ಯವಾಗಿದೆ ಎಂದು ಎಚ್‌ಆರ್‌ಡಬ್ಲ್ಯೂ ಹೇಳಿರುವುದಾಗಿ ದಿ ಟೆಲಿಗ್ರಾಫ್ ವರದಿ ಮಾಡಿವೆ.

ಶಿಕ್ಷಣ, ಉದ್ಯೋಗ, ಚಲನೆಯ ಸ್ವಾತಂತ್ರ್ಯ, ಉಡುಗೆ,  ಆರೋಗ್ಯ ರಕ್ಷಣೆ ಮತ್ತು ಕ್ರೀಡೆಗೆ ಪ್ರವೇಶ. ಲಿಂಗ ಆಧಾರಿತ ಹಿಂಸೆ ಸೇರಿದಂತೆ ಹಲವಾರು ವಿಭಾಗಗಳಲ್ಲಿ ಮಹಿಳೆಯರು ಮತ್ತು ಹುಡುಗಿಯರ ಹಕ್ಕುಗಳನ್ನು ತಾಲಿಬಾನ್ ನಿರ್ಬಂಧಿಸುತ್ತಿದೆ ಎಂದು ಎಚ್‌ಆರ್‌ಡಬ್ಲ್ಯೂ ಮಹಿಳಾ ಹಕ್ಕುಗಳ ವಿಭಾಗದ ಹಂಗಾಮಿ ನಿರ್ದೇಶಕಿ ಹೀದರ್ ಬರ್ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ 1996 ಮತ್ತು 2001ರ ನಡುವೆ ಮೊದಲ ಬಾರಿಗೆ ಅಧಿಕಾರ ಹಿಡಿದಿದ್ದ ತಾಲಿಬಾನ್, ಮಹಿಳೆಯರು ಕುಟುಂಬದ ಪುರುಷ ಸದಸ್ಯರೊಂದಿಗೆ ಮಾತ್ರ ಹೊರಗೆ ತೆರಳಲು ಅವಕಾಶ ನೀಡಿದ್ದರು.

ಇದು ಅಧಿಕೃತವಾಗಿ ರಾಷ್ಟ್ರೀಯ ನೀತಿಯಾಗಿಲ್ಲ, ಆದರೆ, ಕಳೆದ ವಾರ ಹೆರಾತ್ ನಗರದಲ್ಲಿ ಹೆಚ್‌ಆರ್‌ಡಬ್ಲ್ಯೂ ಸಂಶೋಧನೆಯಲ್ಲಿ ತಾಲಿಬಾನ್ ಅಧಿಕಾರಿಗಳು ಮತ್ತು ಹೋರಾಟಗಾರರು ಬೀದಿಗಳಲ್ಲಿ ಜಾರಿಗೊಳಿಸುತ್ತಿರುವುದು ಕಂಡುಬಂದಿದೆ.

ತಾಲಿಬಾನ್ ಕ್ಯಾಬಿನೆಟ್‌ನಲ್ಲಿ ಯಾವುದೇ ಮಹಿಳಾ ಸದಸ್ಯರಿಲ್ಲ, ಮಹಿಳಾ ವ್ಯವಹಾರಗಳ ಸಚಿವಾಲಯ ಸರ್ಕಾರದಿಂದ ಕಣ್ಮರೆಯಾಗಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು