News Karnataka Kannada
Monday, April 29 2024
ವಿದೇಶ

ಪಾಕಿಸ್ತಾನ: ಅಲ್ಪಸಂಖ್ಯಾತ ಮಹಿಳೆಯರ ಮೇಲಿನ ಅತ್ಯಾಚಾರ ನಿರಂತರ

Manisha Roopeta becomes first Hindu woman to become DSP in Pakistan
Photo Credit :

ಇಸ್ಲಾಮಿಕ್ ದೇಶವಾದ ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರು, ಹಿಂದೂಗಳು, ಕ್ರಿಶ್ಚಿಯನ್ನರು ಹಾಗೂ ಸಿಖ್ ಸಮುದಾಯದ ಮಹಿಳೆಯರ ಮೇಲೆ ದೌರ್ಜನ್ಯ ಹೆಚ್ಚಾಗುತ್ತಲೇ ಇದೆ.

ಮಾನವ ಹಕ್ಕುಗಳ ಕಾರ್ಯಕರ್ತ ಆಶಿಕ್ನಾಜ್ ಶೋಖರ್ ವರದಿಯೊಂದನ್ನು ನೀಡಿದ್ದು, ಇದರಲ್ಲಿ 2021ರ ಮೊದಲಾರ್ಧದಲ್ಲಿ ಪಾಕ್‌ನಲ್ಲಿ ಒಟ್ಟಾರೆ 6,754 ಮಹಿಳೆಯರು ಕಾಣೆಯಾಗಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ.

ಈ 6,754 ಮಹಿಳೆಯರಲ್ಲಿ 1,890 ಮಹಿಳೆಯರ ಮೇಲೆ ಅತ್ಯಾಚಾರ ಎಸಗಲಾಗಿದ್ದು, 731 ಮಹಿಳೆಯರು ಚಿತ್ರಹಿಂಸೆಗೆ ಒಳಗಾಗಿದ್ದಾರೆ. ಮಹಿಳೆಯರಷ್ಟೇ ಅಲ್ಲ 752 ಮಕ್ಕಳ ಮೇಲೂ ಅತ್ಯಾಚಾರ ಎಸಗಲಾಗಿದ್ದು, ಪಾಕಿಸ್ತಾನದಲ್ಲಿ ಹೆಣ್ಣುಮಕ್ಕಳ ಸ್ಥಿತಿ ಭಯಹುಟ್ಟಿಸುವಂತಿದೆ ಎನ್ನುವುದಕ್ಕೆ ಇದು ನಿದರ್ಶನವಾಗಿದೆ.

ಪಾಕಿಸ್ತಾನದಲ್ಲಿ ಮಹಿಳೆಯರು ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ. ಧಾರ್ಮಿಕ ಅಲ್ಪಸಂಖ್ಯಾತ ಬಾಲಕಿಯರ ಅಪಹರಣ ಮಾಮೂಲಾಗಿದೆ. ಹಿಂದೂ, ಸಿಖ್ ಹಾಗೂ ಕ್ರಿಶ್ಚಿಯನ್ ಮಹಿಳೆಯರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರಿಸಲಾಗುತ್ತಿದೆ. ಈ ಬಗ್ಗೆ ಪಾಕ್ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

ಹೆಣ್ಣು ಮಕ್ಕಳನ್ನು ರಕ್ಷಿಸಲು ನಿರ್ದಿಷ್ಟ ಕಾನೂನು ರೂಪಿಸುವ ಅವಶ್ಯವಿದ್ದರೂ ಸರ್ಕಾರ ಈ ಬಗ್ಗೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಪಾಕ್ ಮೀಡಿಯಾಗಳು ಈ ಪ್ರಕರಣಗಳು ಕಣ್ಣಿಗೆ ಬಿದ್ದರೂ ಕಾಣದಂತೆ ಕೆಲವೊಂದನ್ನು ಮಾತ್ರ ಸುದ್ದಿಯಾಗಿ ಬಿತ್ತರಿಸುತ್ತಿವೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು