ವಾಷಿಂಗ್ಟನ್ : 12 ಉಗ್ರ ಸಂಘಟನೆಗಳಿಗೆ ಪಾಕಿಸ್ತಾನ ತವರೂರಾಗಿದೆ ಎಂದು ಅಮೆರಿಕದ ಸಂಸದೀಯ ಸಮಿತಿ ವರದಿಯೊಂದು ಹೇಳಿದೆ. ಇದರೊಂದಿಗೆ ತಾನು ಉಗ್ರರನ್ನು ಪೋಷಿಸುವುದಿಲ್ಲ ಎಂದು ಹೇಳುವ ಪಾಕಿಸ್ತಾನದ ಬಣ್ಣವನ್ನು ಈ ವರದಿ ಮತ್ತೊಮ್ಮೆ ಬಟಾಬಯಲು ಮಾಡಿದೆ.
‘ಪಾಕಿಸ್ತಾನದ ಉಗ್ರ ಸಂಘಟನೆಗಳು’ ಎಂಬ ಹೆಸರಿನ ಈ ವರದಿಯನ್ನು ಇತ್ತೀಚೆಗೆ ಅಮೆರಿಕದಲ್ಲಿ ನಡೆದ ಕ್ವಾಡ್ ಶೃಂಗಸಭೆಯ ಮುನ್ನಾ ದಿನ ಸಲ್ಲಿಸಲಾಗಿದೆ. 12 ಉಗ್ರ ಸಂಘಟನೆಗಳಲ್ಲಿ ಐದು ಉಗ್ರ ಸಂಘಟನೆಗಳು ಭಾರತದ ವಿರುದ್ಧ ಚಟುವಟಿಕೆ ನಡೆಸಲು ಹುಟ್ಟಿಕೊಂಡಿವೆ ಎಂದು ವರದಿಯಲ್ಲಿ ವಿವರಿಸಲಾಗಿದೆ.
ಈ ಸಂಘಟನೆಗಳನ್ನು 2001ರಲ್ಲೇ ಅಮೆರಿಕವು ‘ವಿದೇಶಿ ಉಗ್ರ ಸಂಘಟನೆಗಳು’ ಎಂದು ಹೆಸರಿಸಿತ್ತು.