ಇಸ್ಲಾಮಾಬಾದ್: ಇಸ್ಲಾಮಿಕ್ ಸ್ಟೇಟ್ಗೆ ಸಂಬಂಧಿಸಿದ ಭಯೋತ್ಪಾದಕ ಕಮಾಂಡರ್ನನ್ನು ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಪೊಲೀಸರು ಹತ್ಯೆ ಮಾಡಿದ್ದಾರೆ.
ಪೊಲೀಸ್ ಭಯೋತ್ಪಾದನಾ ನಿಗ್ರಹ ವಿಭಾಗವು ಭಯೋತ್ಪಾದಕರ ಅಡಗುತಾಣದ ಮೇಲೆ ಗುರುವಾರ ದಾಳಿ ನಡೆಸಿತು. ಆಗ ಐಸಿಸ್ ಕಮಾಂಡರ್ ಮೇಲೆ ಪೊಲೀಸರು ಗುಂಡು ಹಾರಿಸಿದರು. ಈ ವೇಳೆ ಪೊಲೀಸರು ಪ್ರತಿಯಾಗಿ ಭಯೋತ್ಪಾದಕನನ್ನು ಹತ್ಯೆಗೈದರು, ಆತನ ಸಹಚರರು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪೆಶಾವರದ ಈ ಪ್ರಾಂತೀಯ ರಾಜಧಾನಿಯಲ್ಲಿ ಭಯೋತ್ಪಾದಕ ಕಮಾಂಡರ್ ಅಡಗುತಾಣದ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ ಪೊಲೀಸರು ಈ ಹತ್ಯೆ ಮಾಡಿದ್ದಾರೆ.
ಹತ್ಯೆಗೀಡಾದ ಭಯೋತ್ಪಾದಕ ದೇಶದಲ್ಲಿರುವ ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಗುಂಪಿನ ಸ್ಥಳೀಯ ಕಮಾಂಡರ್ ಆಗಿದ್ದು, ಪೇಶಾವರದ ಮಸೀದಿಯೊಂದರ ಮೇಲೆ ಇತ್ತೀಚೆಗೆ ನಡೆದ ದಾಳಿ ಸೇರಿದಂತೆ ಹಲವಾರು ಭಯೋತ್ಪಾದಕ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾನೆ,
ಈ ದಾಳಿಗಳ ವೇಳೆ ಹಲವು ಜನರು ಅಸುನೀಗಿದ್ದು, ನೂರಾರು ಮಂದಿ ಗಾಯಗೊಂಡಿದ್ದರು. ಇಮಾಮ್ ಸೇರಿದಂತೆ ಕೆಲವು ಪೊಲೀಸರನ್ನು ಐಸಿಸ್ ಕಮಾಂಡರ್ ಕೊಂದಿದ್ದಲ್ಲದೆ ಉದ್ದೇಶಿತ ಹತ್ಯೆಗಳ ಹಲವಾರು ಘಟನೆಗಳಲ್ಲಿ ಭಾಗಿಯಾಗಿದ್ದಾನೆ ಎಂದು ಮೂಲಗಳು ತಿಳಿಸಿವೆ. ಇದೇ ವೇಳೆ ಪರಾರಿಯಾಗಿರುವ ಭಯೋತ್ಪಾದಕನ ಸಹಚರರಿಗಾಗಿ ಶೋಧ ನಡೆಸಲಾಗುತ್ತಿದೆ.