ದೇಶದೆಲ್ಲೆಡೆ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಪ್ರತಿಯೊಬ್ಬರೂ ತಮ್ಮದೇ ಶೈಲಿಯಲ್ಲಿ ಹಬ್ಬದ ಆಚರಣೆಯಲ್ಲಿ ಮುಳುಗಿದ್ದಾರೆ. ಇದೀಗ ಭಾರತೀಯರಿಗೆ ಅಮೆರಿಕಾ ಅಧ್ಯಕ್ಷ ಜೋ ಬಿಡನ್ ಕೂಡ ದೀಪಾವಳಿಯ ಶುಭಾಶಯ ತಿಳಿಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ಕತ್ತಲೆಯಿಂದ ಜ್ಞಾನ, ವಿವೇಕ ಮತ್ತು ಸತ್ಯವಿದೆ ಎಂಬುದನ್ನು ದೀಪಾವಳಿಯ ಬೆಳಕು ನಮಗೆ ನೆನಪಿಸಲಿ. ವಿಭಜನೆಯಿಂದ, ಏಕತೆ. ಹತಾಶೆಯಿಂದ ಭರವಸೆಯೆಡಗಿನ ತುಡಿತವಾಗಿದೆ ಎಂದಿದ್ದಾರೆ.
ಅಮೆರಿಕದಲ್ಲಿ ಮತ್ತು ಪ್ರಪಂಚದಾದ್ಯಂತ ದೀಪಾವಳಿ ಆಚರಿಸುತ್ತಿರುವ ಹಿಂದೂಗಳು, ಸಿಖ್ಖರು, ಜೈನರು ಮತ್ತು ಬೌದ್ಧರಿಗೆ ಪೀಪಲ್ಸ್ ಹೌಸ್ ನಿಂದ ದೀಪಾವಳಿಯ ಶುಭಾಶಯಗಳು ಎಂದು ಹೇಳಿದ್ದಾರೆ.