Categories: ವಿದೇಶ

ದಕ್ಷಿಣ ಕೋರಿಯದಲ್ಲೊಂದು ವಿಶಿಷ್ಟ ಅಭಿಯಾನ

ಸಿಯೋಲ್ : ದಕ್ಷಿಣ ಕೋರಿಯಾದ ಮಹಿಳೆಯರು #women_shortcut_campaign ಎನ್ನುವ ನೂತನ ಮತ್ತು ವಿಶಿಷ್ಟ  ಹ್ಯಾಷ್ ಟ್ಯಾಗ್ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಅದರ ಹಿಂದಿನ ಘಟನೆ ಅತ್ಯಂತ ಸ್ವಾರಸ್ಯಕರವಾದುದು. ಏಕೆಂದರೆ ಆ ಅಭಿಯಾನಕ್ಕೆ ಪ್ರೇರಣೆ ದಕ್ಷಿಣ ಕೋರಿಯಾದ ಬಿಲ್ಲುಗಾರ್ತಿ ಆನ್ ಸಾನ್. ಈಕೆ  ಟೊಕಿಯೊ ಒಲಿಂಪಿಕ್ಫ್ ಕ್ರೀಡಾಕೂಟದಲ್ಲಿ ಮೂರು ಚಿನ್ನದ ಪದಕಗಳನ್ನು ಗೆದ್ದಿದ್ದಾಳೆ. ಆದರೆ ತನ್ನ ಸಾಧನೆಯನ್ನು ಸಂಭ್ರಮದಿಂದ ಆಚರಿಸಿಕೊಳ್ಳಲು ಆಕೆಗೆ ಆಗುತ್ತಿಲ್ಲ. ಏಕೆಂದರೆ  ಅದಕ್ಕೆ ಕಾರಣ ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಕೂದಲಿನ ವಿಚಾರವಾಗಿ ನಡೆದ ಟ್ರಾಲಿಂಗ್.

ಆಕೆ ತುಂಡುಗೂದಲಿಗೆ ದೇಶದ ಪುರುಷ ಆನ್ ಲೈನ್ ಬಳಕೆದಾರರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ದ.ಕೊರಿಯಾದಲ್ಲಿ ತುಂಡುಗೂದಲನ್ನು ಹೊಂದಿದ ಯುವತಿಯರು, ಮಹಿಳೆಯರನ್ನು ಕೆಟ್ಟದಾಗಿ ಕಾಣುವ ಪ್ರವೃತ್ತಿಯಿದೆ.

ದಕ್ಷಿಣ   ಕೊರಿಯಾದಲ್ಲಿ ತುಂಡುಗೂದಲು ಬಿಟ್ಟ ಯುವತಿಯರನ್ನು ಸ್ತ್ರೀವಾದಿಗಳೆಂದು ಹೀಗಳೆಯುವುದು ಮಾತ್ರವಲ್ಲ ಅವರನ್ನು ಪುರುಷ ದ್ವೇಷಿಗಳೆಂದೂ ಕಾಣುತ್ತಾರೆ. ಹೀಗಾಗಿಯೇ ಒಲಿಂಪಿಕ್ಸ್ ಪದಕ ಗೆದ್ದುದರ ಹೊರತಾಗಿಯೂ ಆನ್ ಸಾನ್ ರನ್ನು ಅಲ್ಲಿನ ಪುರುಷರು ಕುಹಕ ಪೋಸ್ಟ್ ಗಳಿಂದ ಚುಚ್ಚಿದ್ದರು.

ಇದರಿಂದ ಅಲ್ಲಿನ ಮಹಿಳಾ ಸಮುದಾಯ ಒಗ್ಗಟ್ಟಾಗಿ #women_shortcut_campaign ಎನ್ನುವ ಅಭಿಯಾನವನ್ನು ಪ್ರಾರಂಭಿಸಿದ್ದಾರೆ. ಆನ್ ಸಾನ್ ಅವರಿಗೆ ಬೆಂಬಲವಾಗಿ ದ.ಕೊರಿಯ ಯುವತಿಯರು ತಮ್ಮ ಉದ್ದಗೂದಲನ್ನು ತುಂಡಾಗಿಸಿ ಫೋಟೋ ತೆಗೆದು #women_shortcut_campaign ಎಂದು ನಮೂದಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ

Raksha Deshpande

Recent Posts

ಭಾರತದಲ್ಲೂ ಕಪ್ಪು ಚರ್ಮದವರನ್ನು ಹೋಲುವ ಜನರಿದ್ದಾರೆ: ಅಧೀರ್ ರಂಜನ್ ಚೌಧರಿ

ಸ್ಯಾಮ್ ಪಿತ್ರೋಡಾ ಅವರ “ಜನಾಂಗೀಯ” ಹೇಳಿಕೆಯನ್ನು ಪಶ್ಚಿಮ ಬಂಗಾಳದ ಕಾಂಗ್ರೆಸ್ ಅಧ್ಯಕ್ಷ ಅಧೀರ್ ರಂಜನ್ ಚೌಧರಿ ಸಮರ್ಥಿಸಿಕೊಂಡಿದ್ದಾರೆ.

18 mins ago

ಶಿವಮೊಗ್ಗ ಗ್ಯಾಂಗ್​ವಾರ್​: ಗಾಯಗೊಂಡಿದ್ದ ಮತ್ತೊಬ್ಬ ಸಾವು

ಲಷ್ಕರ್ ಮೊಹಲ್ಲಾದ ಮೀನು ಮಾರುಕಟ್ಟೆ ಬಳಿ ಮೇ.08 ರಂದು ನಡೆದ ಗ್ಯಾಂಗ್ ವಾರ್ ನಲ್ಲಿ ಇಬ್ಬರು ರೌಡಿಗಳಾದ ಗೌಸ್ ಮತ್ತು…

41 mins ago

ನಂಜನಗೂಡು ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ: ವಿದ್ಯಾರ್ಥಿನಿ ಬಾಂಧವ್ಯ ತಾಲೂಕಿಗೆ ಪ್ರಥಮ ‌

ತಾಲ್ಲೂಕಿಗೆ ಶೇ.86.74 ರಷ್ಟು ಫಲಿತಾಂಶ ಬಂದಿದ್ದು, ನಂಜನಗೂಡಿನ ಸರ್ಕಾರಿ ಆದರ್ಶ ಶಾಲೆಯ ವಿದ್ಯಾರ್ಥಿನಿ ಬಾಂಧವ್ಯ ತಾಲ್ಲೂಕಿಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದಾರೆ…

58 mins ago

ಲೋಕಸಭೆ ಚುನಾವಣೆ: ಭಾಲ್ಕಿ ಕ್ಷೇತ್ರದಲ್ಲಿ ಅತ್ಯಧಿಕ ಮತದಾನ

ಬೀದರ್‌ ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 65.45ರಷ್ಟು ಮತದಾನ ದಾಖಲಾಗಿದ್ದು, ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಭಾಲ್ಕಿಯಲ್ಲಿ ಅತಿ ಹೆಚ್ಚು…

1 hour ago

ಕುಡಿಯುವ ನೀರಿನ ಸಮಸ್ಯೆ ನಿವಾರಣೆ: ಮಲಪ್ರಭಾ ಕಾಲುವೆಗೆ ಮೇ 14 ರಿಂದ 23 ರವರೆಗೆ ನೀರು

ಮೇ 14 ರಿಂದ 23 ರವರೆಗೆ ನವಿಲುತೀರ್ಥ ಜಲಾಶಯದಿಂದ ಮಲಪ್ರಭಾ ಹಾಗೂ ನರಗುಂದ ಶಾಖಾ ಕಾಲುವೆ ಮೂಲಕ ನವಲಗುಂದ ಅಣ್ಣಿಗೇರಿ,…

2 hours ago

ಬಿಜೆಪಿ ಸಾಮಾಜಿಕ ಜಾಲತಾಣ ಸಂಚಾಲಕ ಪ್ರಶಾಂತ್‌ ಮಾಕನೂರು ಬಂಧನ

ಎಸ್‌ಸಿ, ಎಸ್‌ಟಿ ಅನುದಾನ ಮುಸ್ಲಿಂ ಪಾಲಾಗುತ್ತಿದೆ ಎಂದು ಬಿಜೆಪಿ ತನ್ನ ಎಕ್ಸ್‌ ಖಾತೆಯನ್ನು ವಿಡಿಯೋ ಜಾಹೀರಾತು ಪ್ರಕಟಿಸಿತ್ತು. ಈ ವಿಡಿಯೋ…

2 hours ago