ಕೊರೋನಾ ವೈರಸ್ ಯಾರನ್ನೂ ಬಿಡದೇ ಬಾಧಿಸುತ್ತಿದೆ. ಇದೀಗ ಡೆನ್ಮಾರ್ಕ್ನ ಮಹಾರಾಣಿ ಹಾಗೂ ಸ್ಪೇನ್ನ ಚಕ್ರಾಧಿಪತಿಗೂ ಕೊರೋನಾ ದೃಢಪಟ್ಟಿದ್ದು, ಐಸೋಲೇಟ್ ಆಗಿದ್ದಾರೆ.
81 ವರ್ಷದ ಡೆನ್ಮಾರ್ಕ್ ರಾಣಿ ಮಾರ್ಗರೆತ್ II ಅವರಿಗೆ ಸೋಂಕು ಕಾಣಿಸಿದೆ, ಸದ್ಯ ಸೌಮ್ಯ ಲಕ್ಷಣಗಳಿದ್ದು, ಕೋಪನ್ ಹೇಗನ್ನಲ್ಲಿರುವ ಅರಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೂರು ಡೋಸ್ ಲಸಿಕೆ ಕೂಡ ಪಡೆದಿದ್ದಾರೆ.
ಸ್ಪೇನ್ ದೇಶದ ರಾಜ ಫೆಲಿಪ್ VI ಅವರಿಗೂ ಸೋಂಕು ದೃಢಪಟ್ಟಿದ್ದು, ಸೌಮ್ಯ ಲಕ್ಷಣಗಳು ಕಾಣಿಸಿವೆ. ಅರಮನೆಯಲ್ಲಿಯೇ ಪ್ರತ್ಯೇಕವಾಗಿದ್ದು, ಒಂದು ವಾರ ಕ್ವಾರೆಂಟೀನ್ನಲ್ಲಿ ಇರಲಿದ್ದಾರೆ.