News Karnataka Kannada
Sunday, April 28 2024
ವಿದೇಶ

ಜಪಾನ್‍: ಬೆಂಕಿ ಅವಘಡ, 27 ಮಂದಿ ಸಾವಿನ ಶಂಕೆ!

Fire Iran 13072021
Photo Credit :

ಟೋಕಿಯೋ,ಡಿ.17 : ಪಶ್ಚಿಮ ಜಪಾನ್‍ನ ಒಸಾಕಾದಲ್ಲಿನ ಕಟ್ಟಡವೊಂದರಲ್ಲಿ ಸಂಭವಿಸಿದ ಅಗ್ನಿ ಅನಾಹುತದಲ್ಲಿ 27 ಜನರು ಮೃತಪಟ್ಟಿರುವುದಾಗಿ ಶಂಕಿಸಲಾಗಿದೆ ಎಂದು ಅಗ್ನಿಶಾಮಕ ಅಧಿಕಾರಿಗಳು ಇಂದು ತಿಳಿಸಿದ್ದಾರೆ. ಕಿಟಾಶಿಂಚಿ ಶಾಪಿಂಗ್ ಮತ್ತು ಮನರಂಜನಾ ಪ್ರದೇಶದ ಎಂಟು ಅಂತಸ್ತಿನ ಕಟ್ಟಡದ ನಾಲ್ಕನೇ ಮಹಡಿಯಲ್ಲಿ ಬೆಂಕಿ ಅವಘಡ ಉಂಟಾಯಿತು ಎಂದು ಕಿಶಿಮೊಟೋ ಅವರು ಹೇಳಿದ್ದಾರೆ.

28 ಜನರು ಅಗ್ನಿ ಅನಾಹುತದಿಂದ ಬಾಧೆಗೊಳಗಾಗಿದ್ದು, ಅವರಲ್ಲಿ 27 ಮಂದಿ ಹೃದಯ ವೈಫಲ್ಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾರೆ ಎಂದು ಕಿಶಿಮೊಟೋ ನುಡಿದಿದ್ದಾರೆ. ಇದುವರೆಗೆ 23 ಜನರನ್ನು ಸಮೀಪದ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಈ ಕಟ್ಟಡವು ಒಂದು ಆಂತರಿಕ ವೈದ್ಯಕೀಯ ಕ್ಲಿನಿಕ್, ಒಂದು ಇಂಗ್ಲಿಷ್ ಭಾಷಾ ಶಾಲೆ ಮತ್ತು ಇತರ ಕೆಲವು ವಾಣಿಜ್ಯ ಕೇಂದ್ರಗಳಿಗೆ ಆಶ್ರಯ ಕಲ್ಪಿಸಿದೆ ಎಂದು ಎನ್‍ಎಚ್‍ಕೆ ನ್ಯಾಷನಲ್ ಟೆಲಿವಿಷನ್ ವರದಿ ಮಾಡಿದೆ.

ಬೆಂಕಿಗೆ ಕಾರಣವೇನು ಎಂಬುದು ಸದ್ಯಕ್ಕೆ ತಿಳಿದು ಬಂದಿಲ್ಲ. ಯಾರೋ ಬೆಂಕಿ ಹೊತ್ತಿಸಿರುವ ಹಾಗಿದೆ ಎಂಬ ಆಯಾಮದಲ್ಲೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಕಟ್ಟಡದ ಇತರ ಮಹಡಿಗಳಲ್ಲಿದ್ದ ಜನರನ್ನು ತೆರವುಗೊಳಿಸಲಾಗಿದೆ ಎಂದು ನಂಬಲಾಗಿದೆ ಎಂಬುದಾಗಿ ಕಿಶಿವೊಟೋ ವಿವರಿಸಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು