News Karnataka Kannada
Monday, May 06 2024
ವಿದೇಶ

ಜಗತ್ತಿನಾದ್ಯಂತ ಕೋವಿಡ್ ಪ್ರಕರಣ ಇಳಿಕೆ

Covid
Photo Credit :

ಜಿನೀವಾ: ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದ್ದು, ಜಾಗತಿಕವಾಗಿ 3.6 ಮಿಲಿಯನ್ ಹೊಸ ಪ್ರಕರಣಗಳು ವರದಿಯಾಗಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ. ಹಿಂದಿನ ವಾರ 4 ಮಿಲಿಯನ್ ಹೊಸ ಸೋಂಕುಗಳು ವರದಿಯಾಗುತ್ತಿದ್ದು ಇದೀಗ ಈ ವಾರ ಇದರ ಸಂಖ್ಯೆಯಲ್ಲಿ ಇನ್ನು ಕಡಿಮೆಯಾಗುತ್ತಿದೆ ಎಂದು ಡಬ್ಲ್ಯುಎಚ್ಒ ತಿಳಿಸಿದೆ.

ಮಂಗಳವಾರ ಬಿಡುಗಡೆಯಾದ ಸಾಂಕ್ರಾಮಿಕ ರೋಗದ ಇತ್ತೀಚಿನ ಅಪ್‌ಡೇಟ್‌ನಲ್ಲಿ, ಎರಡು ಪ್ರದೇಶಗಳಲ್ಲಿ ಪ್ರಕರಣಗಳಲ್ಲಿ ಪ್ರಮುಖ ಇಳಿಕೆ ಕಂಡುಬಂದಿದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ. ಮಧ್ಯಪ್ರಾಚ್ಯದಲ್ಲಿ 22 ಪ್ರತಿಶತದಷ್ಟು ಕುಸಿತ ಮತ್ತು ಆಗ್ನೇಯ ಏಷ್ಯಾದಲ್ಲಿ 16 ಪ್ರತಿಶತದಷ್ಟು ಕುಸಿತ ಕಂಡಿದೆ.

ಯುಎನ್ ಆರೋಗ್ಯ ಸಂಸ್ಥೆ ಕಳೆದ ವಾರದಲ್ಲಿ ಕೇವಲ 60,000ಕ್ಕಿಂತ ಕಡಿಮೆ ಸಾವುಗಳು ಸಂಭವಿಸಿವೆ. ಇದು 7 ಪ್ರತಿಶತದಷ್ಟು ಕುಸಿತವಾಗಿದೆ. ಆಗ್ನೇಯ ಏಷ್ಯಾದಲ್ಲಿ ಕೋವಿಡ್ -19 ಸಾವುಗಳಲ್ಲಿ ಶೇಕಡಾ 30ರಷ್ಟು ಇಳಿಕೆ ಕಂಡುಬಂದಿದ್ದರೆ, ಪಶ್ಚಿಮ ಪೆಸಿಫಿಕ್ ಪ್ರದೇಶವು ಶೇ. 7ರಷ್ಟು ಹೆಚ್ಚಳವಾಗಿದೆ ಎಂದು ಅದು ಹೇಳಿದೆ.

ಅಮೆರಿಕಾ, ಭಾರತ, ಬ್ರಿಟನ್, ಟರ್ಕಿ ಮತ್ತು ಫಿಲಿಪೈನ್ಸ್ ನಲ್ಲಿ ಹೆಚ್ಚು ಕರೋನವೈರಸ್ ಪ್ರಕರಣಗಳು ಕಂಡುಬಂದಿವೆ. ವೇಗವಾಗಿ ಹರಡುವ ಡೆಲ್ಟಾ ರೂಪಾಂತರವು ಈಗ 185 ದೇಶಗಳಲ್ಲಿ ಕಂಡುಬಂದಿದೆ. ಪ್ರಪಂಚದ ಪ್ರತಿಯೊಂದು ಭಾಗದಲ್ಲೂ ಇದೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
44
News Karnataka Kannada

The most exciting, trusted and preferred news websites of Karnataka and Kannadigas around the world.

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು