ಬೀಜಿಂಗ್: ಪ್ರಸ್ತುತ ಭೂಮಿಯ ಸುತ್ತ ಸುತ್ತುತ್ತಿರುವ ಚೀನಾದ ಬಾಹ್ಯಾಕಾಶ ನಿಲ್ದಾಣದ ನಿರ್ಮಾಣವನ್ನು ಪೂರ್ಣಗೊಳಿಸಲು ಚೀನಾ ಭಾನುವಾರ ಆರು ತಿಂಗಳ ಕಾರ್ಯಾಚರಣೆಗೆ ಮೂವರು ಗಗನಯಾತ್ರಿಗಳನ್ನು ಕಳುಹಿಸಿದೆ.
ಗನಯಾತ್ರಿಗಳಾದ ಚೆನ್ ಡಾಂಗ್, ಲಿಯು ಯಾಂಗ್ ಮತ್ತು ಕೈ ಕ್ಸುಝೆ ಅವರನ್ನು ವಾಯುವ್ಯ ಚೀನಾದ ಜಿಯುಕ್ವಾನ್ನಲ್ಲಿರುವ ಉಪಗ್ರಹ ಉಡಾವಣಾ ಕೇಂದ್ರದಿಂದ ಶೆಂಝೌ-14 ನೌಕೆಯ ಮೂಲಕ ಬಾಹ್ಯಾಕಾಶಕ್ಕೆ ಕಳುಹಿಸಲಾಗಿದೆ.
ಈ ಮೂವರು ಟಿಯಾಂಗಾಂಗ್ ಬಾಹ್ಯಾಕಾಶ ನಿಲ್ದಾಣದ ಜೋಡಣೆ ಮತ್ತು ನಿರ್ಮಾಣವನ್ನು ಪೂರ್ಣಗೊಳಿಸಲು ಸ್ಥಳೀಯ ತಂಡದೊಂದಿಗೆ ಸಹಕರಿಸುತ್ತಾರೆ. ಇದನ್ನು ಏಕ-ಮಾಡ್ಯೂಲ್ ರಚನೆಯಿಂದ ಮೂರು ಮಾಡ್ಯೂಲ್ಗಳ ರಾಷ್ಟ್ರೀಯ ಬಾಹ್ಯಾಕಾಶ ಪ್ರಯೋಗಾಲಯವಾಗಿ ಅಭಿವೃದ್ಧಿಪಡಿಸುತ್ತಾರೆ ಎಂದು ಮೂಲಗಳು ತಿಳಿಸಿವೆ.