ಬೀಜಿಂಗ್: ಚೀನಾದ ಶಾಂಘೈನಲ್ಲಿ ವೇಗವಾಗಿ ಹರಡುತ್ತಿರುವ ಕೋವಿಡ್-19 ನಿಯಂತ್ರಿಸಲು ಹೆಣಗಾಡುತ್ತಿರುವ ಚೀನಾ,ಸೇನೆಯ 2 ಸಾವಿರ ವೈದ್ಯಕೀಯ ಸಿಬ್ಬಂದಿ ಸೇರಿದಂತೆ, 10 ಸಾವಿರಕ್ಕೂ ಹೆಚ್ಚು ಆರೋಗ್ಯ ಕಾರ್ಯಕರ್ತರನ್ನು ನಿಯೋಜನೆ ಮಾಡಿದೆ.
ಎರಡು ಹಂತದ ಲಾಕ್ಡೌನ್ ಎರಡನೇ ವಾರಕ್ಕೆ ಪ್ರವೇಶಿಸಿದ್ದರಿಂದ ಸೋಮವಾರ ತನ್ನ 25 ದಶಲಕ್ಷ ನಿವಾಸಿಗಳ ಸಾಮೂಹಿಕ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ.
ಅನೇಕ ಕಾರ್ಖಾನೆಗಳು ಮತ್ತು ಹಣಕಾಸು ಸಂಸ್ಥೆಗಳು ತಮ್ಮ ಉದ್ಯೋಗಿಗಳನ್ನು ಪ್ರತ್ಯೇಕಿಸುವ ಮೂಲಕ ಕಾರ್ಯನಿರ್ವಸಲು ಸೂಚಿಸಿವೆ. ಬಂಡವಾಳ ಹೂಡಿಕೆ ಮತ್ತು ಉತ್ಪಾದನಾ ವಲಯದ ಮೇಲೆ ಲಾಕ್ಡೌನ್ನ ಗಂಭಿರ ಪರಿಣಾಮ ಉಂಟು ಮಾಡಿದ್ದು, ಆರ್ಥಿಕ ಹಿನ್ನೆಡೆ ಆರಂಭವಾಗಿದೆ.