News Karnataka Kannada
Wednesday, May 01 2024
ವಿದೇಶ

ಚೀನಾದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆ ಇಳಿಕೆ: ಕಳೆದ 24 ಗಂಟೆಗಳಲ್ಲಿ 20 ಕೇಸ್​​ ದೃಢ

ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಆರು ಮಂದಿ ರೋಗಿಗಳಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ ಪಿ. ಸಿ ಕುಮಾರಸ್ವಾಮಿ ಹೇಳಿದ್ದಾರೆ.
Photo Credit : IANS

ಚೀನಾ: ಕರೋನಾ ಪತ್ತೆಯಾದ ಚೀನಾದಲ್ಲಿ ದಿನದಿಂದ ದಿನಕ್ಕೆ ಕರೋನಾ ಪ್ರಕರಣಗಳು ಕಡಿಮೆಯಾಗತ್ತಿವೆ. ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಹೊಸದಾಗಿ 20 ಕೋವಿಡ್​ ಕೇಸ್​​ಗಳು ವರದಿಯಾಗಿವೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗದ ವರದಿ ತಿಳಿಸಿದೆ.

ಇದರಲ್ಲಿ ಬೀಜಿಂಗ್‌ನಲ್ಲಿ ಎಂಟು ಮತ್ತು ಟಿಯಾಂಜಿನ್ ಮತ್ತು ಶಾಂಘೈನಲ್ಲಿ ತಲಾ ಆರು ಪ್ರಕರಣಗಳು ವರದಿಯಾಗಿವೆ. ಬೀಜಿಂಗ್​ನಲ್ಲಿ 4 ಲಕ್ಷಣರಹಿತ ಕೋವಿಡ್​ ಕೇಸ್​​ಗಳ ದೃಢಪಟ್ಟಿವೆ. ಕರೋನಾದಿಂದ 50 ಸೋಂಕಿತರು ಚೇತರಿಸಿಕೊಂಡಿದ್ದು, ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ.

ಇನ್ನು ಶಾಂಘೈ ನಗರದಲ್ಲಿ ಆರು ಕರೋನಾ ಕೇಸ್​ಗಳು ಪತ್ತೆಯಾಗಿದ್ದು, 61 ಸ್ಥಳೀಯ ಲಕ್ಷಣ ರಹಿತ ಪ್ರಕರಣಗಳನ್ನು ಭಾನುವಾರ ವರದಿ ಮಾಡಿದೆ. ಇನ್ನು ಸೋಂಕಿನಿಂದ 215 ವಿವಿಧ ಆಸ್ಪತ್ರೆಗಳಿಂದ ಬಿಡುಗಡೆಯಾಗಿದ್ದಾರೆ. ಚೀನಾದಲ್ಲಿ 2,748 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ರಾಷ್ಟ್ರೀಯ ಆರೋಗ್ಯ ಆಯೋಗವು ತಿಳಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು