ಇಂಗ್ಲೆಂಡ್: ಇಂಗ್ಲೆಂಡ್ನಲ್ಲಿ ಇನ್ಮುಂದೆ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಹಾಕುವ ಮತ್ತು ಕೋವಿಡ್ ಪಾಸ್ ತೋರಿಸುವ ಅವಶ್ಯ ಇಲ್ಲ.
ಮುಂದಿನ ಗುರುವಾರದಿಂದ ಕೋವಿಡ್ನ ಎಲ್ಲಾ ನಿಯಮಗಳನ್ನು ಕೈಬಿಡಲಾಗುವುದು ಎಂದು ಪ್ರಧಾನಿ ಬೋರಿಸ್ ಜಾನ್ಸನ್ ಘೋಷಿಸಿದ್ದಾರೆ.ಜತೆಗೆ ಜನರು ಮನೆಯಿಂದ ಕೆಲಸ ಮಾಡುವಂತೆ ಸರ್ಕಾರ ನೀಡಿರುವ ಸಲಹೆಯನ್ನು ತಕ್ಷಣವೇ ಕೈ ಬಿಡುತ್ತೇವೆ ಎಂದೂ ಹೇಳಿದ್ದಾರೆ.
ಕಡ್ಡಾಯವಾಗಿ ಮಾಸ್ಕ್ ಹಾಕುವುದು, ಮನೆಯಿಂದಲೇ ಕೆಲಸ ಹಾಗೂ ಕೋವಿಡ್ ಪಾಸ್ ತೋರಿಸುವುದು ಇದೆಲ್ಲಾ ‘ಪ್ಲಾನ್ ಬಿ’ ಆಗಿತ್ತು. ಇದೀಗ ‘ಪ್ಲಾನ್ ಎ’ಗೆ ಹಿಂದಿರುಗಲಾಗುತ್ತಿದೆ ಎಂದು ಪ್ರಧಾನಿ ಹೇಳಿದ್ದಾರೆ.