News Karnataka Kannada
Sunday, May 19 2024
ವಿದೇಶ

 ಕಠ್ಮಂಡು : ಪರ್ವತ ಏರುತ್ತಲೇ ಪ್ರಾಣಬಿಟ್ಟ ಪರ್ವತಾರೋಹಿ

Photo Credit :

ಕಠ್ಮಂಡು: ಪ್ರಪಂಚದ ಮೂರನೇ ಅತಿ ಎತ್ತರ ಶಿಖರ ಏರುತ್ತಿರುವಾಗಲೇ ಭಾರತದ ಪರ್ವತಾರೋಹಿ ಸಾವನ್ನಪ್ಪಿದ್ದಾರೆ. ಸದ್ಯ ಈ ಪರ್ವತ ನೆರೆಯ ದೇಶ ನೇಪಾಳಕ್ಕೆ ಸೇರಿದೆ.

ಹಿಮಾಲಯ ಪರ್ವತವನ್ನು ಹೊಂದಿಕೊಂಡಿರುವ ಕಾಂಚನಜುಂಗಾ ಪರ್ವತ ಏರುವಾಗಲೇ ಪರ್ವತಾರೋಹಿ ನಾರಾಯಣ ಐಯ್ಯರ್​ (52) ಸಾವನ್ನಪ್ಪಿದ್ದು, ಈ ವರ್ಷ ಮೃತಪಟ್ಟ ಮೂವರು ಪರ್ವತಾರೋಹಿಗಳಲ್ಲಿ ಒಬ್ಬರಾಗಿದ್ದಾರೆ.

8200 ಮೀಟರ್​ ಎತ್ತರವಿರುವ ಕಾಂಚನಜುಂಗಾ ಪರ್ವತವನ್ನು ಪರ್ವತಾರೋಹಿಗಳ ತಂಡ ಏರುತ್ತಿತ್ತು. ಮಾರ್ಗ ಮಧ್ಯದಲ್ಲೇ ಸುಸ್ತಾಗಿ ಬಿದ್ದ ನಾರಾಯಣ ಅಯ್ಯರ್​ ಅಲ್ಲೇ ಅಸುನೀಗಿದ್ದಾರೆ, ಇವರಿಗೆ ಇಬ್ಬರಿಂದ ಮಾರ್ಗದರ್ಶನ ನೀಡಲಾಗುತ್ತಿತ್ತು ಎಂದು ತಂಡದ ಪ್ರಮುಖ ನವೀಶ್​ ಕರ್ಕಿ ತಿಳಿಸಿದ್ದಾರೆ.

ಸದ್ಯ ಅವರ ಕುಟುಂಬಕ್ಕೆ ವಿಷಯ ಮುಟ್ಟಿಸಿದ್ದು, ಪರ್ವತದಿಂದ ಮೃತದೇಹವನ್ನು ತರುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದರು. ಇನ್ನು ಈ ವರ್ಷ 68 ವಿದೇಶಿ ಪರ್ವತಾರೋಹಿಗಳಿಗೆ ಮಾತ್ರ ಪರ್ವತ ಏರಲು ನೇಪಾಳ ಸರ್ಕಾರ ಅನುಮತಿ ನೀಡಿತ್ತು ಎಂದು ಅವರು ಹೇಳಿದರು.

ಹಿಮಾಲಯ ಪರ್ವತವನ್ನು ಹೊಂದಿಕೊಂಡಿರುವ ಕಾಂಚನಜುಂಗಾ ಪರ್ವತ ಏರುವಾಗಲೇ ಪರ್ವತಾರೋಹಿ ನಾರಾಯಣ ಐಯ್ಯರ್​ (52) ಸಾವನ್ನಪ್ಪಿದ್ದು, ಈ ವರ್ಷ ಮೃತಪಟ್ಟ ಮೂವರು ಪರ್ವತಾರೋಹಿಗಳಲ್ಲಿ ಒಬ್ಬರಾಗಿದ್ದಾರೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.

Leave a Reply

Your email address will not be published. Required fields are marked *

1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು