News Karnataka Kannada
Friday, May 17 2024
ವಿದೇಶ

ಉಕ್ರೇನ್ ಶಾಲೆ ಮೇಲೆ ಬಾಂಬ್ ದಾಳಿ : 60ಕ್ಕೂ ಹೆಚ್ಚು ಜನರ ಸಾವು

Photo Credit :

 ಉಕ್ರೇನ್: ಉಕ್ರೇನ್‌ನ ಬಿಲೋಹೊರಿವ್ಕಾ ಗ್ರಾಮದ ಶಾಲೆಯೊಂದರ ಮೇಲೆ ನಡೆದ ರಷ್ಯಾದ ಬಾಂಬ್ ದಾಳಿಯಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ.

ಅವಶೇಷಗಳಡಿಯಲ್ಲಿ ಉಳಿದಿರುವ 60 ಜನರು ನಾಪತ್ತೆಯಾಗಿದ್ದಾರೆ. ಅವರು ಕೂಡ ಸಾವನ್ನಪ್ಪಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಆದರೆ, ಅವರ ಮೃತದೇಹಗಳು ಲಭ್ಯವಾಗುವವರೆಗೂ ಈ ಬಗ್ಗೆ ನಿಖರವಾಗಿ ಹೇಳಲು ಸಾಧ್ಯವಿಲ್ಲ ಎಂದು ಲುಹಾನ್ಸ್ಕ್ ಪ್ರದೇಶದ ಗವರ್ನರ್ ಸೆರ್ಹಿ ಗೈಡೈ ಹೇಳಿದ್ದಾರೆ.

ಸುಮಾರು 90 ಜನರು ಆಶ್ರಯ ಪಡೆದಿದ್ದ ಶಾಲೆಯ ಮೇಲೆ ರಷ್ಯಾ ಶನಿವಾರ ಮಧ್ಯಾಹ್ನ ಬಾಂಬ್ ಹಾಕಿದೆ ಎಂದು ಗೈದೈ ಹೇಳಿದ್ದಾರೆ. ಈ ವೇಳೆ ಮೂವತ್ತು ಜನರನ್ನು ರಕ್ಷಿಸಲಾಗಿದೆ. ಅವರಲ್ಲಿ ಏಳು ಮಂದಿ ಗಾಯಗೊಂಡಿದ್ದಾರೆ ಎಂದು ಗೈದೈ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ತಿಳಿಸಿದ್ದಾರೆ. ಕಟ್ಟಡಗಳ ಅವಶೇಷಗಳಡಿಯಲ್ಲಿ 60 ಜನರು ಸಾವನ್ನಪ್ಪಿರುವ ಸಾಧ್ಯತೆಯಿದೆ ಎಂದು ಕೂಡ ಅವರು ತಿಳಿಸಿದ್ದಾರೆ.

ವ್ಲಾಡಿಮಿರ್ ಪುಟಿನ್ ಘೋಷಿಸಿರುವ ರಷ್ಯಾ ಮತ್ತು ವೊಲೊಡಿಮಿರ್ ಝೆಲೆನ್ಸ್ಕಿ ಅವರ ಉಕ್ರೇನ್ ನಡುವಿನ ಹೋರಾಟವು ಸತತ 74ನೇ ದಿನವೂ ಮುಂದುವರಿದಿದ್ದು, ಉಭಯ ದೇಶಗಳ ನಡುವೆ ಶಾಂತಿಯ ಯಾವುದೇ ಲಕ್ಷಣಗಳಿಲ್ಲ. ಮುತ್ತಿಗೆ ಹಾಕಿದ ಮರಿಪೋಲ್ ಬಂದರು ನಗರದಲ್ಲಿರುವ ಅಜೋವ್‌ಸ್ಟಾಲ್ ಉಕ್ಕಿನ ಸ್ಥಾವರದಿಂದ ಎಲ್ಲಾ ಮಹಿಳೆಯರು ಮತ್ತು ಮಕ್ಕಳನ್ನು ಸ್ಥಳಾಂತರಿಸಲಾಗಿದೆ ಎಂದು ಕೈವ್ ಹೇಳಿದ್ದಾರೆ.

ಅಮೆರಿಕಾದ ಅಧ್ಯಕ್ಷ ಜೋ ಬಿಡೆನ್, ಇಂಗ್ಲೆಂಡ್ ಪ್ರಧಾನಿ ಬೋರಿಸ್ ಜಾನ್ಸನ್ ಮತ್ತು ಇತರ ಜಿ -7 ನಾಯಕರು ಭಾನುವಾರ ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ವೀಡಿಯೊ ಕರೆ ಮೂಲಕ ಭೇಟಿಯಾಗಲಿದ್ದಾರೆ. ವರ್ಚುವಲ್ ಸಭೆಗೆ ಮುಂಚಿತವಾಗಿ, ಯುಕೆ ಯುದ್ಧ-ಹಾನಿಗೊಳಗಾದ ರಾಷ್ಟ್ರಕ್ಕೆ 1.3 ಬಿಲಿಯನ್ ರೂ. ಮೌಲ್ಯದ ಮಿಲಿಟರಿ ಸಹಾಯವನ್ನು ಘೋಷಿಸಿತು.

“ದಾಳಿ ನಡೆದ ಸುಮಾರು ನಾಲ್ಕು ಗಂಟೆಗಳ ನಂತರ ಬೆಂಕಿಯನ್ನು ನಂದಿಸಲಾಯಿತು. ನಂತರ ಅವಶೇಷಗಳನ್ನು ತೆರವುಗೊಳಿಸಲಾಯಿತು. ದುರದೃಷ್ಟವಶಾತ್ ಇಬ್ಬರ ಶವಗಳು ಪತ್ತೆಯಾಗಿವೆ. ಇನ್ನೂ 60 ಜನರ ಬಗ್ಗೆ ಯಾವುದೇ ಸುಳಿವು ಪತ್ತೆಯಾಗಿಲ್ಲ” ಎಂದು ಹೈದೈ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ಬರೆದಿದ್ದಾರೆ. ಅವಶೇಷಗಳಡಿಯಿಂದ ಮೂವತ್ತು ಜನರನ್ನು ಸ್ಥಳಾಂತರಿಸಲಾಗಿದ್ದು, ಏಳು ಮಂದಿ ಗಾಯಗೊಂಡಿದ್ದಾರೆ. ಕಟ್ಟಡಗಳ ಅವಶೇಷಗಳಡಿಯಲ್ಲಿ ಅರವತ್ತು ಜನರು ಸಾವನ್ನಪ್ಪಿರುವ ಸಾಧ್ಯತೆಯಿದೆ. ರಷ್ಯಾದ ಪಡೆಗಳು ನಾಗರಿಕರನ್ನು ಗುರಿಯಾಗಿಸಿಕೊಂಡಿವೆ ಎಂದು ಉಕ್ರೇನ್ ಆರೋಪಿಸಿದೆ ಆದರೆ, ಈ ಆರೋಪಗಳನ್ನು ರಷ್ಯಾ ತಿರಸ್ಕರಿಸಿದೆ.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
1616

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು