News Karnataka Kannada
Monday, May 06 2024
ವಿದೇಶ

ಇಸ್ರೇಲ್​ನಲ್ಲಿ ಹೊಸ ಕೋವಿಡ್ ರೂಪಾಂತರ ಪತ್ತೆ

Covid
Photo Credit : IANS

ಇಸ್ರೇಲ್‌ : ಇಸ್ರೇಲ್‌ನ ಆರೋಗ್ಯ ಸಚಿವಾಲಯವು ಬುಧವಾರ ಹೊಸ ಕೋವಿಡ್ ರೂಪಾಂತರದ ಎರಡು ಪ್ರಕರಣಗಳನ್ನು ದಾಖಲಿಸಿದೆ ಎಂದು ಹೇಳಿದೆ. ಆದರೆ ಅಧಿಕಾರಿಗಳು ಅದರ ಬಗ್ಗೆ ಅನಗತ್ಯವಾಗಿ ಚಿಂತಿಸುತ್ತಿಲ್ಲ ಎಂದು ಹೇಳಿದ್ದಾರೆ. ಕೋವಿಡ್-19 ವೈರಸ್‌ನ ಓಮಿಕ್ರಾನ್ ವೇರಿಯಂಟ್‌ನ ಎರಡು ಉಪ-ರೂಪಾಂತರಗಳನ್ನು ಸಂಯೋಜಿಸಿದ ಈ ತಳಿಯನ್ನು ಬಿಎ.1 ಮತ್ತು ಬಿಎ.2 ಎಂದು ಕರೆಯಲಾಗುತ್ತದೆ. ಇಸ್ರೇಲ್‌ನ ಬೆನ್ ಗುರಿಯನ್ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ಪ್ರಯಾಣಿಕರನ್ನು ಪಿಸಿಆರ್ ಪರೀಕ್ಷೆಗೆ ಒಳಪಡಿಸಿದ ಸಮಯದಲ್ಲಿ ಅವರಲ್ಲಿ ಈ ಹೊಸ ಉಪ ರೂಪಾಂತರಗಳು ಕಂಡು ಬಂದಿವೆ ಎಂದು ಹೇಳಲಾಗುತ್ತಿದೆ.

“ಈ ಹೊಸ ಉಪ ರೂಪಾಂತರಗಳ ಬಗ್ಗೆ ಇನ್ನೂ ವಿಶ್ವಕ್ಕೆ ತಿಳಿದಿಲ್ಲ” ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದ್ದಾರೆ. “ಇಲ್ಲಿಯವರೆಗೆ ಪತ್ತೆಯಾದ ಸಂಯೋಜಿತ ತಳಿಯ ಎರಡು ಪ್ರಕರಣಗಳು ಜ್ವರ, ತಲೆನೋವು ಮತ್ತು ಸ್ನಾಯು ವಿಕಲತೆಯ ಸೌಮ್ಯ ಲಕ್ಷಣಗಳಿಂದ ಇವರು ಬಳಲುತ್ತಿದ್ದಾರೆ ಮತ್ತು ಇದಕ್ಕೆ ವಿಶೇಷ ವೈದ್ಯಕೀಯ ಪ್ರತಿಕ್ರಿಯೆಯ ಅಗತ್ಯವಿಲ್ಲ” ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇಸ್ರೇಲ್‌ನ ಸಾಂಕ್ರಾಮಿಕ ರೋಗದ ತುರ್ತು ಚಿಕಿತ್ಸೆಯ ಮುಖ್ಯಸ್ಥ ಸಲ್ಮಾನ್ ಜರ್ಕಾ ಅವರು ಈ ಹೊಸ ರೂಪಾಂತರಗಳ ಬಗ್ಗೆ ಆತಂಕವನ್ನು ಕಡಿಮೆ ಮಾಡಿದ್ದಾರೆ ಎಂದು ಹೇಳಬಹುದು. ಇವರು “ಸಂಯೋಜಿತ ರೂಪಾಂತರಗಳ ವಿದ್ಯಮಾನವು ಎಲ್ಲರಿಗೂ ತಿಳಿದಿದೆ” ಎಂದು ಜರ್ಕಾ ಆರ್ಮಿ ರೇಡಿಯೋಗೆ ತಿಳಿಸಿದರು. “ಈ ಹಂತದಲ್ಲಿ, ಈ ಪ್ರಕರಣಗಳು ಗಂಭೀರವಾದ ಸ್ವರೂಪವನ್ನು ಪಡೆಯುತ್ತವೆ ಎಂಬುದರ ಬಗ್ಗೆ ನಾವು ಅಷ್ಟೊಂದು ಚಿಂತಿಸಬೇಕಾಗಿಲ್ಲ” ಎಂದು ಹೇಳಿದರು.

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
12790
NewsKannada

Read More Articles

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು