Categories: ವಿದೇಶ

ಇನ್ನೆರಡು ತಿಂಗಳಲ್ಲಿ ಗ್ರೀನ್ ಕಾರ್ಡ್ ವ್ಯರ್ಥ : ಭಾರತೀಯ ಉದ್ಯೋಗಿಗಳಿಗೆ ಅಸಮಾಧಾನ

ವಾಷಿಂಗ್ಟನ್ : ಲಕ್ಷಾಂತರ ಗ್ರೀನ್‌ಕಾರ್ಡ್‌ಗಳು ಅಮೆರಿಕದಲ್ಲಿ ವ್ಯರ್ಥವಾಗುವ ಅಪಾಯದಲ್ಲಿದೆ. ಅಮೆರಿಕದಲ್ಲಿ ಕಾನೂನುಬದ್ಧ ಕಾಯಂ ವಾಸದ ಹಕ್ಕಿಗಾಗಿ ದಶಕಗಳಿಂದ ಕಾಯುತ್ತಿರುವ ಭಾರತದ ಐಟಿ ಉದ್ಯೋಗಿಗಳಲ್ಲಿ ಇದು ಅಸಮಾಧಾನ ಮೂಡಿಸಿದೆ.

ವಲಸಿಗರಿಗೆ ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸುವ ಸೌಲಭ್ಯವನ್ನು ಅಧಿಕೃತವಾಗಿ ನೀಡುವ ದಾಖಲೆಯಾದ ಗ್ರೀನ್ ಕಾರ್ಡ್ ಅನ್ನು ಕಾಯಂ ವಾಸದ ಕಾರ್ಡ್ ಎಂದು ಕರೆಯಲಾಗುತ್ತದೆ. ಸಾಮಾನ್ಯವಾಗಿ 1,40,000 ಮಂದಿಗೆ ವಾರ್ಷಿಕವಾಗಿ ಉದ್ಯೋಗಾಧಾರಿತ ವಲಸಿಗರಿಗೆ ಅವಕಾಶ ನೀಡಲಾಗುತ್ತಿತ್ತು. ಆದರೆ ಈ ವರ್ಷ ಈ ಕೋಟವನ್ನು 2,61,500ಕ್ಕೆ ಹೆಚ್ಚಿಸಲಾಗಿದೆ. ಆದರೆ, ಕಾನೂನಿನ ಅಡಿಯಲ್ಲಿ ಸೆಪ್ಟೆಂಬರ್ 30ರ ಒಳಗೆ ಈ ವೀಸಾಗಳನ್ನು ವಿತರಿಸದೆ ಹೋದರೆ ಅವುಗಳು ಶಾಶ್ವತವಾಗಿ ವ್ಯರ್ಥವಾಗಲಿವೆ ಎಂದು ಭಾರತ ಮೂಲದ ವೃತ್ತಿಪರರು ಬೇಸರ ವ್ಯಕ್ತಪಡಿಸಿದ್ದಾರೆ.

ಗ್ರೀನ್‌ ಕಾರ್ಡ್‌ ಮೇಲಿದ್ದ ನಿಷೇಧ ಹಿಂಪಡೆದ ಜೋ ಬಿಡೆನ್‌: ಲಕ್ಷಾಂತರ ಭಾರತೀಯರಿಗೆ ರಿಲೀಫ್‌ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳು (ಯುಎಸ್‌ಸಿಐಎಸ್) ನಡೆಸಿರುವ ಪ್ರಸ್ತುತದ ಪ್ರಕ್ರಿಯೆ ಪ್ರಕಾರ 1 ಲಕ್ಷಕ್ಕೂ ಅಧಿಕ ಹೆಚ್ಚುವರಿ ಗ್ರೀನ್‌ ಕಾರ್ಡ್‌ಗಳು ವ್ಯರ್ಥವಾಗಲಿವೆ. ಜೋ ಬೈಡನ್ ಆಡಳಿತ ಸೂಕ್ತ ಕ್ರಮ ತೆಗೆದುಕೊಳ್ಳದೆ ಹೋದರೆ ಈ ವರ್ಷ ಲಭ್ಯವಿರುವ ಭಾರಿ ಪ್ರಮಾಣದ ಗ್ರೀನ್‌ ಕಾರ್ಡ್‌ಗಳು ನಿರುಪಯುಕ್ತವಾಗಲಿವೆ ಎಂದು ಭಾರತದ ಉದ್ಯೋಗಿ ಸಂದೀಪ್ ಪವಾರ್ ತಿಳಿಸಿದ್ದಾರೆ.

ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಶ್ವೇತಭವನ ಇದುವರೆಗೂ ಉತ್ತರ ನೀಡಿಲ್ಲ. ಈ ನಡುವೆ ಅಮೆರಿಕದಲ್ಲಿ ವಾಸಿಸುತ್ತಿರುವ 125 ಭಾರತೀಯರು ಮತ್ತು ಚೀನೀಯರ ಗುಂಪೊಂದು ಗ್ರೀನ್ ಕಾರ್ಡ್‌ಗಳನ್ನು ವ್ಯರ್ಥ ಮಾಡುವುದನ್ನು ತಡೆಯುವಂತೆ ಕೋರ್ಟ್‌ನಲ್ಲಿ ಮೊಕದ್ದಮೆ ಹೂಡಿದೆ.

Raksha Deshpande

Recent Posts

ಬೀದರ್: ಸಂಭ್ರಮದಿಂದ ವಿಶ್ವಗುರು ಬಸವಣ್ಣನವರ ಜಯಂತಿ‌ ಆಚರಣೆ

ಕರ್ನಾಟಕದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರ ಜಯಂತಿ‌ ನಗರದಲ್ಲಿ ಸಡಗರ, ಸಂಭ್ರಮದಿಂದ ಆಚರಿಸಲಾಯಿತು.

10 mins ago

ಡಿ ಬಾಸ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್ ಔಟ್

ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಹು ನಿರೀಕ್ಷಿತ ಡೆವಿಲ್ ಚಿತ್ರದ ಮೇಕಿಂಗ್‌ ರಿಲೀಸ್ ಆಗಿದೆ. ಸಿನಿಮಾದ ತೆರೆ ಹಿಂದಿನ ಗ್ಲಿಂಪ್ಸ್ ಇದಾಗಿದೆ.…

19 mins ago

ಧಾರವಾಡದ ಪೇಡಾ ಈ ಬಾರಿ ಯಾರ ಬಾಯಿಗೆ ಬೀಳಲಿದೆ?; ಜೋಶಿ ವಿರುದ್ಧ ವಿನ್ ಆಗ್ತಾರಾ ವಿನೋದ್

ಕರ್ನಾಟಕದ ವಾಣಿಜ್ಯ ನಗರಿ ಎಂದೇ ಪ್ರಸಿದ್ಧಿ ಪಡೆದ ಜಿಲ್ಲೆ ಧಾರವಾಡ. ಬಾಯಿ ನೀರೂರಿಸುವ ಧಾರವಾಡ ಪೇಡಾಕ್ಕೆ ಧಾರವಾಡವಲ್ಲದೆ ಬೇರೆ ಸಾಟಿಯಿಲ್ಲ,…

21 mins ago

ನಿತ್ಯಾನಂದ ಒಳಕಾಡು ನೇತೃತ್ವದಲ್ಲಿ 3 ವಾರಸುದಾರರಿಲ್ಲದ ಶವಗಳ ಅಂತ್ಯಸಂಸ್ಕಾರ

ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದ್ದ ಮೂರು ಅಪರಿಚಿತ ವ್ಯಕ್ತಿಗಳ ಶವದ ಅಂತ್ಯಸಂಸ್ಕಾರವನ್ನು ಬೀಡಿನಗುಡ್ಡೆಯ ಹಿಂದು ರುದ್ರಭೂಮಿಯಲ್ಲಿ ಗೌರಯುತವಾಗಿ ನಡೆಸಲಾಯಿತು.

41 mins ago

ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮಹಾಲಕ್ಷ್ಮಿ ಯೋಜನೆಯಡಿ 1 ಲಕ್ಷ ರೂ. ಜಮಾ

ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಇಬ್ಬರು ಹೆಂತಿಯರು ಇರುವವರಿಗೆ 2 ಲಕ್ಷ ರೂ. ಆರ್ಥಿಕ ನೆರವು…

55 mins ago

ಕಿಂಗ್ಸ್‌-ರಾಯಲ್ಸ್‌ ಕದನದಲ್ಲಿ ಕಲಾಶ್‌ನಿಕಾವೋ: ಕೊಹ್ಲಿ ಕೆಣಕಿ ಉಳಿದವರುಂಟೇ

ಧರ್ಮಶಾಲಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಸ್ಟೇಡಿಯಂನಲ್ಲಿ ಆರ್‌ ಸಿ ಬಿ ತಂಡ ಪಂಜಾಬ್ ಕಿಂಗ್ಸ್ ಅನ್ನು 60 ರನ್‌ಗಳಿಂದ…

1 hour ago